ನೂರು ಅಡಿ ಕಟೌಟ್ ನಿರ್ಮಿಸುವ ಮೂಲಕ ಹೊಸ ದಾಖಲೆ ಬರೆದ ಎಂ ಎಸ್ ಧೋನಿ ಅಭಿಮಾನಿಗಳು

ಭಾರತ ದೇಶದಲ್ಲೆಡೆ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಎಂ ಎಸ್ ಧೋನಿ ಅವರ ಹುಟ್ಟುಹಬ್ಬ ಬಂದರೆ ಸಾಕು ಅವರ ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಾರೆ. ಇದೇ ಜುಲೈ 7ಕ್ಕೆ ಎಂಎಸ್ ಧೋನಿಯವರ 43ನೇ ಹುಟ್ಟುಹಬ್ಬವಾಗಿದ್ದು, ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆಂಧ್ರ ಪ್ರದೇಶದ  ಧೋನಿ ಅಭಿಮಾನಿಗಳು ನೂರು ಅಡಿ ಕಟೌಟ್ ನಿರ್ಮಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಈ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದೇ ಮೊದಲ ಬಾರಿಗೆ  ಕ್ರಿಕೆಟಿಗನಿಗಾಗಿ ನೂರು ಅಡಿ ಎತ್ತರದ  ಕಟೌಟ್ ನಿರ್ಮಿಸಲಾಗಿದೆ.

ಮಾಜಿ ಕ್ರಿಕೆಟಿಗ ಎಂಎಸ್ ಧೋನಿ ನಾಯಕನಾಗಿ ವಿಕೆಟ್ ಕೀಪರ್ ಆಗಿ, ಬೌಲರ್ಗಳಿಗೆ ಕಣ್ಣಿಂದಲೇ ಸಂದೇಶ ನೀಡುವ ಮೂಲಕ ಬ್ಯಾಟ್ಸ್ಮನ್ಗಳನ್ನು ಫೆಮಿಲಿಯನ್ಗೆ ಕಳಿಸುವ ಚಾಣಾಕ್ಷ ಆಟಗಾರರಾಗಿದ್ದರು  ಏಕದಿನ ವಿಶ್ವಕಪ್ ಹಾಗೂ ಟಿ20 ವಿಶ್ವಕಪ್ ತಂದುಕೊಟ್ಟ ನಾಯಕ ಎಂಬ ಕೀರ್ತಿ ಎಂಎಸ್ ಧೋನಿ ಅವರಿಗೆ ಸಲ್ಲುತ್ತದೆ. ಮುಂದಿನ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮತ್ತೊಮ್ಮೆ ಕಣಕ್ಕಿಳಿಯಬೇಕೆಂಬುದು ಅವರ ಅಭಿಮಾನಿಗಳ ಆಸೆಯಾಗಿದೆ.

https://twitter.com/Itz_Bl3ze/status/1809439545399661003

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read