ತನ್ನ ಮದುವೆ ಇನ್ವಿಟೇಷನ್‌ ನಲ್ಲಿ ಧೋನಿ ಫೋಟೋ ಹಾಕಿಸಿದ MSD ಅಭಿಮಾನಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಧೋನಿಯ ಕ್ಯಾಪ್ಟನ್ ಕೂಲ್ ಅವತಾರ ಮತ್ತು ವಿಕೆಟ್ ಕೀಪಿಂಗ್ ಕೌಶಲಗಳು ಅಭಿಮಾನಿಗಳ ಮನ ಸೆಳೆಯುತ್ತದೆ. ಅವರನ್ನು ಅಪಾರವಾಗಿ ಪ್ರೀತಿಸುವ ಅಭಿಮಾನಿಯೊಬ್ಬರು ಧೋನಿಯ ಫೋಟೋವನ್ನ ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹಾಕಿಸಿದ್ದಾರೆ.

ಛತ್ತೀಸ್‌ಗಢದ ರಾಯ್‌ಗಢ್ ಜಿಲ್ಲೆಯ ತಮ್ನಾರ್‌ನ ಅಭಿಮಾನಿಯೊಬ್ಬರು ತಮ್ಮ ಮದುವೆ ಕಾರ್ಡ್‌ನ ಎರಡೂ ಬದಿಯಲ್ಲಿ ಧೋನಿ ಅವರ ಫೋಟೋ ಮತ್ತು ಅವರ ಜೆರ್ಸಿಯ ಸಂಖ್ಯೆಯನ್ನು ಹಾಕಿಸಿದ್ದಾರೆ. ಮದುವೆ ಕಾರ್ಡ್‌ನಲ್ಲಿ ಥಲ ಎಂಬ ಪದವನ್ನೂ ಬರೆದಿದ್ದಾರೆ. ಅಪೂರ್ವ ಮದುವೆಯ ಆಮಂತ್ರಣ ಪತ್ರಿಕೆ ಗಮನ ಸೆಳೆದಿದೆ.

ತಮ್ನಾರ್ ಬ್ಲಾಕ್‌ನ ಮಿಲುಪಾರದ ಕೊಡ್ಕೆಲ್ ಗ್ರಾಮದ ನಿವಾಸಿಯಾದ ದೀಪಕ್ ಪಟೇಲ್, ಮಹೇಂದ್ರ ಸಿಂಗ್ ಧೋನಿಯ ಅಭಿಮಾನಿಗಳಲ್ಲಿ ಒಬ್ಬರಾಗಿದ್ದಾರೆ. ಬಾಲ್ಯದಿಂದಲೂ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದ ದೀಪಕ್, ಧೋನಿಯನ್ನು ಆದರ್ಶವಾಗಿ ಪರಿಗಣಿಸಿದ್ದರು. ಇವರು ತನ್ನ ಹಳ್ಳಿಯ ಕ್ರಿಕೆಟ್ ತಂಡದ ನಾಯಕರೂ ಆಗಿದ್ದಾರೆ ಮತ್ತು ಅವರಲ್ಲಿನ ಕ್ರೀಡಾ ಪ್ರತಿಭೆಯನ್ನು ಸುತ್ತಮುತ್ತಲಿನ ಜನ ಪ್ರಶಂಸಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಧೋನಿ ನಾಯಕತ್ವದ ಆಟದಲ್ಲಿ ರೂಪಿಸಿದ ತಂತ್ರವನ್ನು ಬಳಸಿಕೊಂಡು ಅನೇಕ ಪಂದ್ಯಗಳನ್ನು ತನ್ನ ತಂಡಕ್ಕೆ ಗೆದ್ದುಕೊಟ್ಟಿದ್ದೇನೆ ಎಂದು ಸ್ವತಃ ದೀಪಕ್ ಹೇಳುತ್ತಾರೆ.

ದೀಪಕ್ ತನ್ನ ಮದುವೆಯ ಆಮಂತ್ರಣ ಪತ್ರಿಕೆಯ ಮುಂಭಾಗ ಮತ್ತು ಹಿಂಭಾಗದಲ್ಲಿ ಧೋನಿ ಫೋಟೋವನ್ನು ಮುದ್ರಿಸಿದ್ದಾರೆ. ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ದೀಪಕ್ ಮತ್ತು ಅವರ ಭಾವಿ ಪತ್ನಿ ಗರಿಮಾ ಅವರ ವಿವಾಹದ ಸಂಪೂರ್ಣ ಮಾಹಿತಿಯಲ್ಲದೆ, ಧೋನಿ ಅವರ ಜೆರ್ಸಿ ಸಂಖ್ಯೆ 7 ಮತ್ತು ಎಂಎಸ್ ಡಿಯ ಉಬ್ಬು ಚಿತ್ರ ಮುದ್ರಿಸಲಾಗಿದೆ.

https://twitter.com/itsshivvv12/status/1664881173603176449?ref_src=twsrc%5Etfw%7Ctwcamp%5Etweetembed%7Ctwterm%5E1664881173603176449%7Ctwgr%5E5158493109585d3f66a82b9585c4868b9f23ed2e%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fchhattisgarh-man-prints-ms-dhonis-photo-on-his-wedding-card-pic-goes-viral-4091900

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read