ಸೆಲ್ಫಿ ಚಿತ್ರದ ಹಾಡಿಗೆ ಅಕ್ಷಯ್​, ಮೃಣಾಲ್​ ಸ್ಟೆಪ್​: ಅಭಿಮಾನಿಗಳು ಫಿದಾ

ಮೃಣಾಲ್ ಠಾಕೂರ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ‘ಕುಡಿಯೇ ನಿ ತೇರಿ ವೈಬ್’ ಹಾಡು ಸಿನಿ ಪ್ರಿಯರಿಗೆ ಬಹಳ ಮೆಚ್ಚುಗೆಯಾಗುತ್ತಿದೆ. ಸೆಲ್ಫಿ ಚಿತ್ರದ ಈ ಹಾಡಿನಲ್ಲಿ ಇವರಿಬ್ಬರ ಕೆಮಿಸ್ಟ್ರಿ ಅಲೆಗಳನ್ನು ಸೃಷ್ಟಿಸಿದೆ. ಇದೀಗ ಅಕ್ಷಯ್ ಕುಮಾರ್ ಅವರು ಮೃಣಾಲ್ ಠಾಕೂರ್ ಜೊತೆಗಿನ ಈ ಹಾಡಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಇಂಟರ್ನೆಟ್ ಅನ್ನು ಪ್ರಭಾವಿತಗೊಳಿಸಿದೆ.

ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಮೃಣಾಲ್ ಠಾಕೂರ್ ಮತ್ತು ಅಕ್ಷಯ್ ಕುಮಾರ್ ತಮ್ಮ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಅಕ್ಷಯ್ ತನ್ನ ಉಬರ್-ಕೂಲ್ ಉಡುಪಿನಲ್ಲಿ ಡ್ಯಾಶಿಂಗ್ ಆಗಿ ಕಂಡುಬಂದರೆ, ಮೃಣಾಲ್ ಡೆನಿಮ್ ಜಂಪ್‌ಸೂಟ್ ಮತ್ತು ಬೂಟ್‌ನಲ್ಲಿ ಹಾಟ್ ಆಗಿ ಕಾಣುತ್ತಿದ್ದಾರೆ.

ಇದು ಅಭಿಮಾನಿಗಳನ್ನು ಸೆಳೆದಿದ್ದು, ಈ ಜೋಡಿಯ ಕೆಮೆಸ್ಟ್ರಿಗೆ ಫಿದಾ ಆಗಿದ್ದಾರೆ. ಥಹರೇವಾರಿ ಕಮೆಂಟ್​ಗಳು ಬರುತ್ತಿವೆ. ಅಕ್ಷಯ್​ ಕುಮಾರ್​ ಈ ವಯಸ್ಸಿನಲ್ಲಿಯೂ ಇಷ್ಟೊಂದು ಅದ್ಭುತವಾಗಿ ನೃತ್ಯ ಮಾಡುತ್ತಿರುವುದಕ್ಕೆ ಅಭಿಮಾನಿಗಳು ಹ್ಯಾಟ್ಸ್​ಆಫ್​ ಎನ್ನುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read