BREAKING NEWS: ಯಾವುದೇ ನಿರ್ಧಾರ ಪ್ರಕಟಿಸದೇ ಮತ್ತೆ ಕುತೂಹಲ ಕಾಯ್ದಿರಿಸಿದ ಸುಮಲತಾ ಅಂಬರೀಶ್; ಏಪ್ರೀಲ್ 3ರಂದು ಮಂಡ್ಯದಲ್ಲೇ ಘೋಷಣೆ ಎಂದ ಸಂಸದೆ

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿರುವ ಸಂಸದೆ ಸುಮಲತಾ, ಏಪ್ರೀಲ್ 3ರಂದು ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಬೆಂಗಳೂರಿನ ಜೆ.ಪಿ.ನಗರದ ನಿವಾಸದಲ್ಲಿ ತೆರೆದ ವಾಹನನದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಸಂಸದೆ ಸುಮಲತಾ, ಮೊನ್ನೆಯವರೆಗೂ ಬಿಜೆಪಿಯಿಂದ ಟಿಕೆಟ್ ಸಿಗುವ ನಿರೀಕ್ಷೆ ಇತ್ತು. ಆದರೆ ಕೊನೇ ಕ್ಷಣದಲ್ಲಿ ಮೈತ್ರಿಯಿಂದಾದ ಬದಲಾವಣೆಯಿಂದಾಗಿ ಬಿಜೆಪಿ ಹೈಕಮಾಂಡ್ ಬೇರೆ ನಿರ್ಧಾರ ಕೈಗೊಂಡಿದೆ. ಇದರಿಂದ ತಮಕೆ ಟಿಕೆಟ್ ಕೈತಪ್ಪಿದೆ. ಇದು ಬೇಸರತಂದಿದೆ. ಆದರೆ ಮಂಡ್ಯ ಜನರ ಶಕ್ತಿಯೇ ನನಗೆ ಆಶಿರ್ವಾದ. ಮಂಡ್ಯ ಋಣ ಬಿಡುವ ಪ್ರಶ್ನೆಯೇ ಇಲ್ಲ ಎಂದು ಭಾವುಕರಾದರು.

ನನಗೆ ಸ್ವಾರ್ಥವಿದ್ದರೆ ಮಂಡ್ಯವೇ ಬೇಕು ಎನ್ನುತ್ತಿರಲಿಲ್ಲ. ಮಂಡ್ಯ ಜನತೆಯ ವಿಶ್ವಾಸ ತೆಗೆದುಕೊಳ್ಳದೇ ಯಾವ ನಿರ್ಧಾರವನ್ನೂ ಪ್ರಕಟಿಸಲ್ಲ. ನಾನೆಂದೂ ಸ್ವಾರ್ಥ ರಾಜಕಾರಣ ಮಾಡಿಲ್ಲ. ಓರ್ವ ಸಂಸದೆಯಾಗಿ ಮಂಡ್ಯ ಕ್ಷೇತ್ರಕ್ಕೆ ಸಾಧ್ಯವಾದಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಮ್ಮ ಜೊತೆ ಯಾವ ದೊಡ್ಡ ನಾಯಕರೂ ಇಲ್ಲ. ಮಂಡ್ಯ ಜನತೆಯೇ ನಮಗೆ ಶಕ್ತಿ. ಏನೇ ನಿರ್ಧಾರ ಕೈಗೊಂಡರೂ ಮಂಡ್ಯ ಜನತೆಯ ಅಭಿಪ್ರಾಯಪಡೆದು ತೀರ್ಮಾನ ಕೈಗೊಳ್ಳುತ್ತೇನೆ. ಹಾಗಾಗಿ ಮಂಡ್ಯಕ್ಕೆ ಹೋಗಿ ಮತ್ತೊಮ್ಮೆ ಸಭೆ ಮಾಡುತ್ತೇನೆ. ಏಪ್ರಿಲ್ 3ರಂದು ಮಂಡ್ಯದಲ್ಲಿಯೇ ನನ್ನ ಮುಂದಿನ ತೀರ್ಮಾನ ಘೋಷಿಸುತ್ತೇನೆ ಎಂದು ತಿಳಿಸಿದ್ದಾರೆ. ಈ ಮೂಲಕ ಸಂಸದೆ ಸುಮಲತಾ ರಾಜಕೀಯ ನಡೆ ಮತ್ತೆ ಕುತೂಹಲ ಮೂಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read