ಸಂಪ್ರದಾಯದ ಕಾರಣಕ್ಕೆ ಮಾತ್ರೆ ತೆಗೆದುಕೊಳ್ಳಲು ನಿರಾಕರಣೆ; ಹೃದಯಾಘಾತದಿಂದ ವ್ಯಕ್ತಿ ಸಾವು | Shocking News

ಇಂದೋರ್‌ನ ಅಭಯ್ ಪ್ರಶಾಲ್‌ನಲ್ಲಿ ಬುಧವಾರ ಬೆಳಿಗ್ಗೆ ವ್ಯಕ್ತಿಯೊಬ್ಬರು ಬ್ಯಾಡ್ಮಿಂಟನ್ ಆಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ದಕ್ಷಿಣ ತುಕೋಗಂಜ್‌ನ ನಿವಾಸಿಯಾಗಿದ್ದ ಅಮಿತ್ ಚೆಲಾವತ್ (45) ಎಂಬವರು ವೈದ್ಯರು ಮತ್ತು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ತಂಡದೊಂದಿಗೆ ಆಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಎರಡು ರೌಂಡ್ ಬ್ಯಾಡ್ಮಿಂಟನ್ ಆಡಿದ ನಂತರ, ಚೆಲಾವತ್ ಕುಳಿತುಕೊಂಡಿದ್ದು ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು ಪ್ರಜ್ಞೆ ತಪ್ಪಿದ್ದಾರೆ. ಅವರ ಸಹೋದ್ಯೋಗಿಗಳು ಸಿಪಿಆರ್ ನೀಡಿದ್ದು, ಇದರಿಂದಾಗಿ ಸ್ವಲ್ಪ ಹೊತ್ತು ಬಿಟ್ಟು ಪ್ರಜ್ಞೆ ಮರಳಿ ಪಡೆದಿದ್ದಾರೆ. ವೈದ್ಯರು ಮಾತ್ರೆ ನೀಡಿದ್ದು, ಆದರೆ ಜೈನ್ ನವಕರ್ಷಿ ಸಂಪ್ರದಾಯದ ಕಾರಣದಿಂದಾಗಿ ಬೆಳಿಗ್ಗೆ 8 ಗಂಟೆಯ ಮೊದಲು ಏನನ್ನೂ ತಿನ್ನಲು ಸಾಧ್ಯವಿಲ್ಲ ಎಂದು ಹೇಳಿ ನಿರಾಕರಿಸಿದ್ದಾರಲ್ಲದೇ ಬಲವಂತವಾಗಿ ಮಾತ್ರೆ ನೀಡಿದಾಗ ಅದನ್ನು ಉಗುಳಿದ್ದಾರೆ.

ನಂತರ ಅವರಿಗೆ ಮತ್ತೊಂದು ಹೃದಯಾಘಾತವಾಗಿದ್ದು, ತಜ್ಞರ ಪ್ರಕಾರ, ಅವರು ಆ ಸಮಯದಲ್ಲಿ ರಕ್ತ ತೆಳುಗೊಳಿಸುವ ಮಾತ್ರೆ ತೆಗೆದುಕೊಂಡಿದ್ದರೆ, ಆಸ್ಪತ್ರೆಗೆ ತಲುಪಲು ಅವರಿಗೆ ಹೆಚ್ಚಿನ ಅವಕಾಶ ಸಿಗುತ್ತಿತ್ತು. ಆದರೆ ಮಾತ್ರೆ ತೆಗೆದುಕೊಳ್ಳದ ಕಾರಣ ಸಾವಿಗೀಡಾಗಿದ್ದಾರೆ. ಚೆಲಾವತ್ ಅವರ ಸಂಬಂಧಿಕರು ಅವರ ಕಣ್ಣುಗಳನ್ನು ದಾನ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read