BIG NEWS: ಚಲನಚಿತ್ರಗಳ ‘ಪೈರಸಿ’ ತಡೆಗೆ ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ

ನವದೆಹಲಿ: ಚಲನಚಿತ್ರಗಳ ಪೈರಸಿ ತಡೆಯಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, 12 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದೆ.

ಸಿನಿಮಾ ಪೈರಸಿ ಹಾವಳಿಯಿಂದ ಪ್ರತಿ ವರ್ಷ ಸುಮಾರು 20 ಸಾವಿರ ಕೋಟಿ ನಷ್ಟ ಹೊಂದುತ್ತಿರುವ ಚಿತ್ರೋದ್ಯಮವನ್ನು ಈ ಸಮಸ್ಯೆಯಿಂದ ಪಾರು ಮಾಡಲು ಹೊಸ ಸಾಂಸ್ಥಿಕ ಕಾರ್ಯವಿಧಾನವನ್ನು ಆಸ್ತಿತ್ವಕ್ಕೆ ತರಲಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ಸಂಸತ್ತಿನಲ್ಲಿ ಇತ್ತೀಚೆಗೆ ಅಂಗೀಕರಿಸಲಾದ ಸಿನಿಮಾಟೋಗ್ರಾಫ್ (ತಿದ್ದುಪಡಿ) ಕಾಯ್ದೆ-2023 ಅಡಿ ಸಾಂಸ್ಥಿಕ ಕಾರ್ಯವಿಧಾನದ ಭಾಗವಾಗಿ ನೇಮಕ ಮಾಡಿರುವ ನೋಡಲ್ ಅಧಿಕಾರಿಗಳು ಪೈರಸಿ ಸಂಬಂಧದ ದೂರುಗಳನ್ನು ಸ್ವೀಕರಿಸಲಿದ್ದಾರೆ ಮತ್ತು ಪೈರಸಿ ಸಿನಿಮಾಗಳ ಲಿಂಕ್ ತೆಗೆದುಹಾಕಲು ಡಿಜಿಟಲ್ ವೇದಿಕೆಗಳಿಗೆ ನಿರ್ದೇಶನ ನೀಡಲಿದ್ದಾರೆ.

ನೋಡಲ್ ಅಧಿಕಾರಿಗಳು ದೂರುಗಳ ಪರಿಶೀಲನೆ ಮಾಡಿ ನಿರ್ದೇಶನ ನೀಡಿದ 48 ಗಂಟೆಯೊಳಗಾಗಿ ಪೈರಸಿ ಸಿನಿಮಾ ಅಥವಾ ವಿಷಯಗಳನ್ನು ಹೊಂದಿರುವ ಇಂಟರ್ ನೆಟ್ ಲಿಂಕ್ ಗಳನ್ನು ತೆಗೆದುಹಾಕಬೇಕಿದೆ. ಅಕ್ರಮವಾಗಿ ಇಂಟರ್ ನೆಟ್ ನಲ್ಲಿ ಸೇರಿಸಲಾದ ಸಿನಿಮಾದ ಹಕ್ಕುಸ್ವಾಮ್ಯವನ್ನು ಹೊಂದಿರುವವರು ಅಥವಾ ನೋಡಲ್ ಅಧಿಕಾರಿಗಳಿಗೆ ದೂರು ಸಲ್ಲಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read