ಭಾರತದ ಇವಿ ಮಾರುಕಟ್ಟೆಯಲ್ಲಿ ಸಂಚಲನ; ಗ್ರ್ಯಾಂಡ್‌ ಎಂಟ್ರಿಗೆ ಸಜ್ಜಾಗಿದೆ ಮಾರುತಿಯ ಮೊದಲ ಎಲೆಕ್ಟ್ರಿಕ್ ಕಾರು……!

ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. 2025ರ ಜನವರಿ 17 ರಿಂದ 22ರೊಳಗೆ ಈ ಎಲೆಕ್ಟ್ರಿಕ್ SUV ಬಿಡುಗಡೆಯಾಗಲಿದೆ ಎಂದು ಹೇಳಲಾಗ್ತಿದೆ. ಈಗಾಗ್ಲೇ 2023ರ ಆಟೋ ಎಕ್ಸ್‌ಪೋದಲ್ಲಿ ಇದನ್ನು ಪರಿಚಯಿಸಲಾಗಿದೆ. 60 kWh ಬ್ಯಾಟರಿ ಹೊಂದಿರುವ ಈ ಕಾರು ಸುಮಾರು 550 ಕಿಮೀ ವ್ಯಾಪ್ತಿಯನ್ನು ನೀಡಬಹುದು. ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್‌ ಕಾರಿನಲ್ಲಿ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ನಂತಹ ಆಧುನಿಕ ವೈಶಿಷ್ಟ್ಯಗಳಿರಲಿವೆ. ಇದರ ಬೆಲೆ 20-25 ಲಕ್ಷ ಎಂದು ಅಂದಾಜಿಸಲಾಗಿದೆ.

ಮಾರುತಿ eVX ಬೃಹತ್ 60 kWh ಬ್ಯಾಟರಿಯೊಂದಿಗೆ ಬರಲಿದೆ. ಒಮ್ಮೆ ಚಾರ್ಜ್‌ ಮಾಡಿದ್ರೆ ಸುಮಾರು 500-550 ಕಿಮೀ ಓಡಬಲ್ಲದು. ಇದರ ಹೊರತಾಗಿ ಸಣ್ಣ ಬ್ಯಾಟರಿ ರೂಪಾಂತರವೂ ಇದ್ದು, ಅದರ ವ್ಯಾಪ್ತಿ ಸುಮಾರು 400 ಕಿ.ಮೀ.

ಸ್ಪೋರ್ಟಿ ಎಲ್‌ಇಡಿ ಹೆಡ್‌ಲೈಟ್‌ಗಳು, ಡಿಆರ್‌ಎಲ್ ಮತ್ತು ಮುಚ್ಚಿದ ಮುಂಭಾಗದ ಗ್ರಿಲ್ ಈ ಕಾರಿನ ಆಕರ್ಷಣೆ. ಇದು ಅತ್ಯದ್ಭುತ ಆಧುನಿಕ ವಿನ್ಯಾಸ ಹೊಂದಿರಲಿದೆ. ಕನೆಕ್ಟೆಡ್‌ ಎಲ್ಇಡಿ ಟೈಲ್ಲೈಟ್ಸ್‌ ಮತ್ತು ಹಿಂಭಾಗದಲ್ಲಿ ಅಲಾಯ್ ಚಕ್ರಗಳ ವಿನ್ಯಾಸವು ಪ್ರೀಮಿಯಂ ಅನುಭವವನ್ನು ನೀಡುತ್ತದೆ.

eVX ದೊಡ್ಡ ಡ್ಯುಯಲ್-ಸ್ಕ್ರೀನ್ ಡಿಜಿಟಲ್ ಡಿಸ್‌ಪ್ಲೇ ಮತ್ತು ಪುಟ್ಟದಾದ  ಡ್ಯಾಶ್‌ಬೋರ್ಡ್ ಅನ್ನು ಹೊಂದಿರುತ್ತದೆ. ಅದು ಇನ್ಫೋಟೈನ್‌ಮೆಂಟ್ ಮತ್ತು ಡ್ರೈವರ್ ಡಿಸ್‌ಪ್ಲೇ ಎರಡರಲ್ಲೂ ಕಾರ್ಯನಿರ್ವಹಿಸುತ್ತದೆ. ಹೆಚ್ಚುವರಿಯಾಗಿ ಇದು ಟಚ್-ಆಧಾರಿತ ಮೌಂಟೆಡ್ ಕಂಟ್ರೋಲ್‌ನೊಂದಿಗೆ ಟು – ಸ್ಪೋಕ್ ಸ್ಟೀರಿಂಗ್ ಚಕ್ರವನ್ನು ಹೊಂದಿರುತ್ತದೆ.

eVX ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಅನ್ನು ಹೊಂದುವ ಸಾಧ್ಯತೆಯಿದೆ. ಹಾಗಾಗಿ ಈ ಕಾರಿನಲ್ಲಿ ಸೇಫ್ಟಿಯ ಸಮಸ್ಯೆ ಆಗುವುದಿಲ್ಲ. ಇದು ಕಾಂಪ್ಯಾಕ್ಟ್ SUV ಆಗಿದ್ದು, ಸುಮಾರು 4.3 ಮೀಟರ್ ಉದ್ದವಿರಲಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸೂಕ್ತವಾಗಿದೆ. ಬೆಲೆ ಮತ್ತು ಫೀಚರ್‌ಗಳನ್ನು ಗಮನಿಸಿದರೆ ಇದು ಭಾರತದ ಇವಿ ಮಾರುಕಟ್ಟೆಯ ಪ್ರೀಮಿಯಂ ಕಾರು ಎನ್ನುವುದರಲ್ಲಿ ಅನುಮಾನವಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read