Watch: ಪಾಸ್ ಪೋರ್ಟ್ ಮರೆತು ʼಏರ್ ಪೋರ್ಟ್ʼ ಗೆ ಬಂದ ನಟಿ….!

ಫ್ಯಾಷನ್ ಪ್ರಿಯೆ, ನಟಿ ಮೌನಿ ರಾಯ್ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲಾ ಗಮನ ಸೆಳೆಯುತ್ತಾರೆ. ಅವರ ವಸ್ತ್ರಗಳು ಮತ್ತು ದುಬಾರಿ ಬೆಲೆಯ ವಸ್ತುಗಳಿಂದ ಹೆಡ್ ಲೈನ್ಸ್ ಆಗುವ ನಟಿ ಇದೀಗ ಪಾಸ್ ಪೋರ್ಟ್ ಮರೆತುಬಂದ ವಿಷಯದಲ್ಲಿ ಮತ್ತೆ ಸುದ್ದಿಯಾಗಿದ್ದಾರೆ.

ಬುಧವಾರ ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಮೌನಿರಾಯ್ ತಮ್ಮ ಪಾಸ್ ಪೋರ್ಟ್ ಮರೆತುಬಂದಿದ್ದರು. ಪರಿಶೀಲನೆ ವೇಳೆ ಪಾಸ್ ಪೋರ್ಟ್ ಗಾಗಿ ಅವರು ತಮ್ಮ 3 ಲಕ್ಷ ರೂಪಾಯಿ ಬೆಲೆಯ ಬ್ಯಾಗ್ ನಲ್ಲಿ ಹುಡುಕಾಟ ನಡೆಸಿದ್ದರು. ಈ ಘಟನೆಯ ವಿಡಿಯೋ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಮೌನಿ ವಿಮಾನ ನಿಲ್ದಾಣವನ್ನು ಪ್ರವೇಶಿಸುವ ಮೊದಲು ಪಾಪರಾಜಿಗಳಿಗೆ ಪೋಸ್ ನೀಡಿ ಅವರೊಂದಿಗೆ ಮಾತುಕತೆ ನಡೆಸಿ ಒಳಗೆ ನಡೆದರು. ಈ ವೇಳೆ ಭದ್ರತಾ ಸಿಬ್ಬಂದಿ ದಾಖಲೆಗಳನ್ನು ತೋರಿಸಲು ಕೇಳಿದಾಗ, ಪಾಸ್‌ಪೋರ್ಟ್ ಅನ್ನು ಮನೆಯಲ್ಲೇ ಮರೆತು ಬಂದಿರುವಾಗಿ ತಿಳಿದು ಗಲಿಬಿಲಿಗೊಂಡರು.

ಮೌನಿ ರಾಯ್ 2022 ರಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಧಾರಿಗಳಾಗಿ ನಟಿಸಿರುವ ‘ಬ್ರಹ್ಮಾಸ್ತ್ರ ಭಾಗ 1: ಶಿವ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮುಂಬರುವ ‘ದಿ ವರ್ಜಿನ್ ಟ್ರೀ’ ಚಿತ್ರದಲ್ಲಿ ಪಾಲಕ್ ತಿವಾರಿ, ಸನ್ನಿ ಸಿಂಗ್ ಮತ್ತು ಸಂಜಯ್ ದತ್ ಜೊತೆ ಮೌನಿರಾಯ್ ಕಾಣಿಸಿಕೊಳ್ಳಲಿದ್ದಾರೆ.

https://youtu.be/nVIdN769R84

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read