ಶಿವಮೊಗ್ಗ : ವಾಹನ ಸವಾರರೇ ಗಮನಿಸಿ : ಈ ಮಾರ್ಗದಲ್ಲಿ ಸಂಚಾರ ಬದಲಾವಣೆ

ಶಿವಮೊಗ್ಗ: ರಾಜ್ಯ ಹೆದ್ದಾರಿ ರಸ್ತೆಯ ಸರಪಳಿ 191,000 ರಿಂದ 191,230 ಫ್ಲೈ ಓವರ್ ಇಳಿಜಾರು ಮತ್ತು ಕೂಡು ರಸ್ತೆಯನ್ನು ಸೇರುವ ಜಾಗದಲ್ಲಿ ಹೆಚ್ಚಿನ ವಾಹನಗಳ ಸಂಚಾರದಿAದ ಹಾಗೂ ಭಾರೀ ವಾಹನಗಳ ಓಡಾಟದಿಂದ ರಸ್ತೆಯು ತೀವ್ರವಾಗಿ ಹಾನಿಗೊಂಡು, ವಾಹನಗಳಿಗೆ ಮತ್ತು ಸಾರ್ವಜನಿಕರಿಗೆ ತೀವ್ರವಾಗಿ ತೊಂದರೆಯಾಗುತ್ತಿದ್ದು, ಫ್ಲೆöÊ ಒವರ್ ಇಳಿಜಾರು ಮುಕ್ತಾಯ ಜಾಗದಿಂದ ಮತ್ತು ಚತುಷ್ಪಥಕ್ಕೆ ಕೂಡುವ ರಸ್ತೆಯ ಜಾಗದವರೆಗೆ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ.

ಶಿವಮೊಗ್ಗದಿಂದ-ಹೊನ್ನಾಳಿ-ಹೊಸಪೇಟೆ ಕಡೆಗೆ ಸಂಚರಿಸುವ ವಾಹನಗಳು ಶಿವಮೊಗ್ಗ ನಗರ-ಎಸ್ಎಚ್57 ಸವಳಂಗ ರಸ್ತೆಯ ಉಷಾ ನರ್ಸಿಂಗ್ ಹೋಮ್-ಜೆಎಸ್ಎಸ್ಸಿ ಕಾಲೇಜ್ ಬಳಿ ಬಲಕ್ಕೆ ತಿರುಗಿ- ಕುವೆಂಪುನಗರ-ಶಾAತಿನಗರದಿAದ ರಾಜ್ಯ ಹೆದ್ದಾರಿ 25 ಕೂಡುವ ರಸ್ತೆ ಮಾರ್ಗವನ್ನು ಅನುಸರಿಸುವುದು.
ಹಾಗೂ ಹೊನ್ನಾಳಿಯಿಂದ -ಶಿವಮೊಗ್ಗ ಹೊಸಪೇಟೆ ಕಡೆಗೆ ಸಂಚರಿಸುವ ವಾಹನಗಳು ರಾಜ್ಯ ಹೆದ್ದಾರಿ 25 ಶಾಂತಿನಗರ ಕ್ರಾಸ್-ಶಾಂತಿನಗರ ಸರ್ಕಲ್ನಿಂದ ಎಡಕ್ಕೆ ತಿರುಗಿ-ರಾಗಿಗುಡ್ಡ ರಸ್ತೆಯಿಂದ-ಕೆಎಸ್ಸಿಎ ಸ್ಟೇಡಿಯಮ್ ಬಳಿ ಎಸ್ಎಚ್ 57 ಉಷಾ ಸರ್ಸಿಂಗ್ ಹೋಮ್- ಶಿವಮೊಗ್ಗ ನಗರಕ್ಕೆ ಸೇರುವ ರಸ್ತೆ ಮಾರ್ಗವನ್ನು ಬಳಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read