ಬೆಂಗಳೂರು: ನಗರದಲ್ಲಿ ಇಂದು ವಿವಿಧ ಸಂಘಟನೆಗಳಿಂದ ಸಾಲು ಸಾಲು ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆ ಕೆಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.
ದಿನಾಂಕ 27.11.2023 ಮತ್ತು 28.11.2023 ರಂದು ಸಂಯುಕ್ತ ಹೋರಾಟ ಸಮಿತಿ ಕರ್ನಾಟಕ ರಾಜ್ಯ ಹಾಗೂ ವಿವಿಧ ಸಂಘಟನೆಗಳು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ಫ್ರೀಡಂಪಾರ್ಕ್ನಲ್ಲಿ ಮಹಾ ಧರಣಿ ರಾಜಭವನ ಚಲೋ ಎಂದು ಕರೆ ನೀಡಿದ್ದು ಸುಗಮ ಸಂಚಾರದ ಹಿತದೃಷ್ಟಿಯಿಂದ ಸೂಕ್ತ ಸಂಚಾರ ಬಂದೋಬಸ್ತ್ ಮಾಡಿಕೊಳ್ಳಲಾಗಿದ್ದು ಸಾರ್ವಜನಿಕರು ಈ ಕೆಳಗಿನ ಪರ್ಯಾಯ ರಸ್ತೆಗಳನ್ನು ಬಳಸಲು ವಿನಂತಿಸಲಾಗಿದೆ.
• ಕೆ.ಜಿ ರಸ್ತೆ ಮೂಲಕ ಮೈಸೂರು ಬ್ಯಾಂಕ್ ವೃತ್ತದಿಂದ ಬಲ ತಿರುವು ಪಡೆದು ಫ್ರೀಡಂ ಪಾರ್ಕ್ ಕಡೆಗೆ ಬರುವ ವಾಹನಗಳು ಕಡ್ಡಾಯವಾಗಿ ಪ್ಯಾಲೇಸ್ ಕ್ರಾಸ್ ರಸ್ತೆಯ ಮಹಾರಾಣಿ ಅಂಡರ್ ಪಾಸ್ ರಸ್ತೆಯನ್ನು ಬಳಸಲು ವಿನಂತಿಸಲಾಗಿದೆ.
• ಫ್ರೀಡಂ ಪಾರ್ಕ್ ಜಂಕ್ಷನ್ನಿಂದ ಕನಕದಾಸ ವೃತ್ತದ ಕಡೆಗೆ ಬರುವ ಮತ್ತು ಹೋಗುವ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದು ವಾಹನ ಸವಾರರು ಸದರಿ ರಸ್ತೆಯನ್ನು ಬಳಸದಂತೆ ವಿನಂತಿಸಲಾಗಿದೆ.
• ಖೋಡೆ ಜಂಕ್ಷನ್ ಕಡೆಯಿಂದ ಕೆ.ಆರ್ ಸರ್ಕಲ್ ಕಡೆಗೆ ಹೋಗುವ ವಾಹನ ಸವಾರರು ಪ್ರೈಓವರ್ ರಸ್ತೆಯಲ್ಲಿ ರೈಲ್ವೆ ನಿಲ್ದಾಣದಿಂದ ಪ್ರತಿಭಟನೆಗೆ ಬರುವಂತ ಜನರು ಕಾಲ್ನಡಿಗೆಯಲ್ಲಿ ಬರುವವರಿದ್ದು ವಾಹನ ಸಂಚಾರ ದಟ್ಟನೆಯಾದಲ್ಲಿ ವಾಹನ ಸವಾರರು ಹಳೆ ಜೆ.ಡಿ.ಎಸ್ ಕಛೇರಿ ರಸ್ತೆಯನ್ನು ಬಳಸುವಂತೆ ಕೋರಲಾಗಿದೆ.
ಸುಬ್ಬಣ್ಣ ಜಂಕ್ಷನ್ನಿಂದ ಎಂ.ಟಿ.ಆರ್ ಜಂಕ್ಷನ್ ಕಡೆಗೆ ಬರುವ ರಸ್ತೆಯು ಹಾಲಿ ಏಕಮುಖ ಸಂಚಾರ ರಸ್ತೆಯಾಗಿದ್ದು ತಾತ್ಕಲಿಕವಾಗಿ ದ್ವಿಮುಖ ಸಂಚಾರ ರಸ್ತೆಯನ್ನಾಗಿ ಪರಿವರ್ತಿಸಲಾಗಿದ್ದು ಗಾಂಧಿನಗರ ಕಡೆಗೆ ಬರುವ ವಾಹನ ಸವಾರರು ಸದರಿ ರಸ್ತೆಯನ್ನು ಬಳಸುವಂತೆ ಕೋರಲಾಗಿದೆ.
ಖೋಡೆ ಜಂಕ್ಷನ್ ನಿಂದ ಮಹಾರಾಣಿ ಜಂಕ್ಷನ್ ವರೆಗೆ, ವೈ ರಾಮಚಂದ್ರ ರಸ್ತೆ, ಕಾಳಿದಾಸ ರಸ್ತೆ, ಪ್ಯಾಲೇಸ್ ರಸ್ತೆ, ಕೆ.ಜಿ ರಸ್ತೆಗಳಲ್ಲಿ ಯಾವುದೇ ಮಾದರಿಯ ವಾಹನಗಳಿಗೆ ಪಾರ್ಕಿಂಗ್ ಅನುಮತಿಸಲಾಗುವುದಿಲ್ಲ ಎಂದು ಸಂಚಾರಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.
https://twitter.com/blrcitytraffic/status/1728723879273943386?ref_src=twsrc%5Etfw%7Ctwcamp%5Etweetembed%7Ctwterm%5E1728723879273943386%7Ctwgr%5Ead90c132b2f4325a3a6200e63d87c9dff472bed4%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fkannadanewsnow-epaper-dh71ad7b0a01d347d2a0a68e5f262fdb7d%2Fbengalurutrafficupdatevaahanasavaararagamanakkenaaleeerastegalallisanchaaratappisiparyaayamaargadallisancharisi-newsid-n559940278