ಬೆಂಗಳೂರು : ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ನೀವು ದಂಡ ಕಟ್ಟದಿದ್ರೆ ಜೋಕೆ..! ನಿಮ್ಮನ್ನು ಹುಡುಕಿಕೊಂಡು ನಿಮ್ಮ ಮನೆಗೆ ಬರ್ತಾರೆ ಪೊಲೀಸರು..!
ಹೌದು, ಟ್ರಾಫಿಕ್ ಫೈನ್ ಕಟ್ಟದಿದ್ರೆ ಕೋರ್ಟ್ ನಿಮಗೆ ಸಮನ್ಸ್ ನೀಡಲಿದ್ದು, ಪೊಲೀಸರು ಮನೆಗೆ ಬಂದು ದಂಡ ವಸೂಲಿ ಮಾಡಲಿದ್ದಾರೆ. ಹೌದು, ಇಂತಹದ್ದೊಂದು ನಿಯಮ ಜಾರಿಗೆ ಬಂದಿದೆ. ಪೊಲೀಸರು ಎಲ್ಲಾ ವಾಹನ ಸವಾರರ ಮನೆಬಾಗಿಲಿಗೆ ಬರುವುದಿಲ್ಲ. ದಂಡದ ಮೊತ್ತ 50 ಸಾವಿರಕ್ಕೂ ಅಧಿಕ ಇದ್ದರೆ ಮಾತ್ರ ಪೊಲೀಸರು ಮನೆಗೆ ಬಂದು ದಂಡ ವಸೂಲಿ ಮಾಡಲಿದ್ದಾರೆ. ಟ್ರಾಫಿಕ್ ಫೈನ್ ಕಟ್ಟದಿದ್ದರೆ ಅಂತಹ ವಾಹನ ಸವಾರರ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಲಿದ್ದು, ಕೋರ್ಟ್ ಸಮನ್ಸ್ ಜಾರಿಯಾಗಲಿದೆ.
ಬೆಂಗಳೂರು ಪೊಲೀಸ್ ಸೇವೆಯು ತನ್ನ “ಟ್ರಾಫಿಕ್ ವಯ್ಲೇಶನ್ ಫೈನ್ ಪೇಮೆಂಟ್” ಸೇವೆಯನ್ನು ಕರ್ನಾಟಕ ಒನ್ ಜೊತೆಗೆ ಸಂಯೋಜಿಸಿದೆ. ಸಂಚಾರ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಿದ ನಾಗರಿಕರು, ಈಗ ತಮ್ಮ ದಂಡವನ್ನು ಕರ್ನಾಟಕ ಒನ್ ಕೇಂದ್ರಗಳಲ್ಲಿ ಯಾವುದಾದರೂ ಒಂದು ಕೇಂದ್ರದಲ್ಲಿ ಪಾವತಿಸಬಹುದು. ಅವರು ನೀಡಿದ ನೋಟಿಸ್ ಅನ್ನು ಕರ್ನಾಟಕ ಒನ್ ಕೇಂದ್ರಗಳಿಗೆ ತರಬೇಕು ಮತ್ತು ಅಲ್ಲಿ ದಂಡದ ಮೊತ್ತವನ್ನು ಪಾವತಿಸಬಹುದು. ಈಗ ನೀವು ನಮ್ಮ ಕರ್ನಾಟಕ ಒನ್ ಪೋರ್ಟಲ್ ಸೇವೆಯ ಮೂಲಕ ಪಾರ್ಕಿಂಗ್ ದಂಡ ಪಾವತಿಗಳನ್ನು ಮಾಡಬಹುದು.