ಮಕ್ಕಳ ಆರೋಗ್ಯ, ಸಂತೋಷಕ್ಕೆ ತಾಯಂದಿರು ಈ ದಿನ ಮಾಡಿ ಉಪವಾಸ

ಮಾಘ ಮಾಸದ ಕೃಷ್ಣ ಪಕ್ಷದ ಸಂಕಷ್ಠಿ ಸಾಕಷ್ಟು ವಿಶೇಷತೆಯನ್ನು ಪಡೆದಿದೆ. ಈ ದಿನ ಉಪವಾಸ ಮಾಡಿ, ಗಣೇಶನ ಆರಾಧನೆ ಮಾಡಿದ್ರೆ ಎಲ್ಲ ಸಮಸ್ಯೆ ಬಗೆಹರಿಯುತ್ತದೆ ಎಂದು ನಂಬಲಾಗಿದೆ. ಈ ದಿನವನ್ನು ಸಂಕಟ ಚತುರ್ಥಿ ಎಂದೂ ಅನೇಕರು ಕರೆಯುತ್ತಾರೆ. ಮಗುವಿಗೆ ಸಂಬಂಧಿಸಿದ ಎಲ್ಲ ಸಂಕಟ ನಾಶವಾಗುವ ಕಾರಣ ಇದಕ್ಕೆ ಸಂಕಟ ಚತುರ್ಥಿ ಎನ್ನಲಾಗುತ್ತದೆ.

ಜನವರಿ 29  ರಂದು ಚೌತಿ ಬಂದಿದೆ. ಈ ದಿನ ಶೋಭನ್ ಯೋಗ ಮತ್ತು ತ್ರಿಗ್ರಾಹಿ ಯೋಗದ ಸಂಯೋಜನೆಯಿದೆ. ಶೋಭನ ಯೋಗದಲ್ಲಿ ಗಣಪತಿ ಪೂಜಿಸುವುದರಿಂದ ಸಂತೋಷ, ಅದೃಷ್ಟ ಮತ್ತು ಆದಾಯ ಹೆಚ್ಚಾಗುತ್ತದೆ. ಶೋಭನ್ ಯೋಗ  ಜನವರಿ 28 ರ ಬೆಳಿಗ್ಗೆ  8. 51ರಿಂದ ಶುರುವಾಗುತ್ತದೆ.  ಜನವರಿ 29 ಬೆಳಿಗ್ಗೆ  9 .44 ಕ್ಕೆ ಮುಕ್ತಾಯವಾಗುತ್ತದೆ.   ಈ ದಿನ ಧನು ರಾಶಿಯಲ್ಲಿ ಮಂಗಳ, ಶುಕ್ರ ಮತ್ತು ಬುಧರು ಇರುವ ಕಾರಣ ಇದನ್ನು ತ್ರಿಗ್ರಾಹಿ ಯೋಗ ಎಂದು ಕರೆಯಲಾಗುತ್ತದೆ.

ಆ ದಿನ ತಾಯಿ ತನ್ನ ಮಕ್ಕಳಿಗಾಗಿ ಉಪವಾಸವನ್ನು ಆಚರಿಸಬೇಕು. ತಾಯಿ ಉಪವಾಸ ಮಾಡಿದರೆ ಮಕ್ಕಳ ಗಂಭೀರ ಖಾಯಿಲೆ ಗುಣವಾಗುತ್ತದೆ. ಅಲ್ಲದೆ ದುಷ್ಟ ಕಣ್ಣುಗಳಿಂದ ಮಕ್ಕಳನ್ನು ರಕ್ಷಿಸಲು ಇದು ಪ್ರಯೋಜನಕಾರಿ. ಇದ್ರಿಂದ ತಾಯಂದಿರಿಗೂ ಲಾಭವಿದೆ. ತಾಯಂದಿರ ಜೀವನದಲ್ಲಿ ಎಲ್ಲ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಈ ದಿನ ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿಯನ್ನು  ಪೂಜಿಸಬೇಕು. ಈ ದಿನ ಗಣಪತಿಗೆ ಹಳದಿ ಬಣ್ಣದ ಬಟ್ಟೆ ತೊಡಿಸಿ, ಸಂಜೆ ಚಂದ್ರನಿಗೆ ನೀರನ್ನು ಅರ್ಪಿಸಿ ಉಪವಾಸವನ್ನು ಕೊನೆಗೊಳಿಸಬೇಕು. ಎಳ್ಳು ಮತ್ತು ಬೆಲ್ಲವನ್ನು ದೇವರಿಗೆ ಅರ್ಪಿಸಿ ಮಕ್ಕಳಿಗೆ ನೀಡಬೇಕು. ಹೀಗೆ ಮಾಡಿದ್ರೆ ಮಕ್ಕಳ ವೃತ್ತಿ ಜೀವನದಲ್ಲಿ ಏಳ್ಗೆಯಾಗುತ್ತದೆ.

ಗಣೇಶನನ್ನು ಪೂಜಿಸುವಾಗ ಸಂಕಟನಾಶನ ಗಣೇಶ ಸ್ತೋತ್ರವನ್ನು ಪಠಿಸಬೇಕು. ಇದು ಮಕ್ಕಳನ್ನು ಎಲ್ಲ ದುಃಖದಿಂದ ದೂರ ಇಡುತ್ತದೆ. ಈ ದಿನ ರಾತ್ರಿ ಪೂಜೆ ಮಾಡಿದ ನಂತರ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿದರೆ ಒತ್ತಡ ಕಡಿಮೆ ಆಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read