ಚಿತ್ರದುರ್ಗ : ಶಿವಶರಣ ಮಾದಾರ ಮಠದ ಚನ್ನಯ್ಯ ಮಠದ ಬಸವಮೂರ್ತಿ ಮಾದಾರ ಚನ್ನಯ್ಯಶ್ರೀ ಅವರಿಗೆ ಮಾತೃ ವಿಯೋಗವಾಗಿದೆ.
ಶ್ರೀ ಮಾದಾರ ಚನ್ನಯ್ಯಶ್ರೀಗಳ ತಾಯಿ ಗಂಗಮ್ಮ(85) ಅವರು ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಚನ್ನಯ್ಯಶ್ರೀಗಳ ತಾಯಿ ಗಂಗಮ್ಮ ಕೊನೆಯುಸಿರೆಳೆದಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಹಿರೇಕಂದವಾಡಿ ಗ್ರಾಮದ ಬಳಿ ಇಂದು ಅಂತ್ಯಸಂಸ್ಕಾರ ಮಾಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.