ನಕಲಿ ದಾಖಲೆ ಸೃಷ್ಟಿಸಿ ಪಾಕ್ ಗಡಿ ಬಳಿಯ ಯುದ್ಧಕಾಲದ ವಾಯುನೆಲೆ ಮಾರಾಟ: 28 ವರ್ಷದ ನಂತರ ತಾಯಿ, ಮಗನ ವಿರುದ್ಧ ಕೇಸ್ ದಾಖಲು

ನವದೆಹಲಿ: ಪಾಕಿಸ್ತಾನ ಗಡಿಯ ಬಳಿಯಿರುವ ಭಾರತೀಯ ವಾಯುಪಡೆಯ ವಾಯುನೆಲೆಯನ್ನು ನಕಲಿ ದಾಖಲೆಗಳನ್ನು ಬಳಸಿ ಮಾರಾಟ ಮಾಡಿದ ಆರೋಪದ ಮೇಲೆ ತಾಯಿ ಮತ್ತು ಮಗನ ವಿರುದ್ಧ ಪಂಜಾಬ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಫಿರೋಜ್‌ಪುರದ ಫತ್ತುವಾಲಾ ಗ್ರಾಮದಲ್ಲಿರುವ ಎರಡನೇ ಮಹಾಯುದ್ಧ ಕಾಲದ ವಾಯುನೆಲೆಯನ್ನು IAF 1962, 1965 ಮತ್ತು 1971 ಸೇರಿದಂತೆ ಅನೇಕ ಯುದ್ಧಗಳಲ್ಲಿ ಬಳಸಿಕೊಂಡಿದೆ.

ಪ್ರಸ್ತುತ ದೆಹಲಿಯಲ್ಲಿ ವಾಸಿಸುತ್ತಿರುವ ಉಷಾ ಅನ್ಸಾಲ್ ಮತ್ತು ಅವರ ಮಗ ನವೀನ್ ಚಂದ್ ಅನ್ಸಾಲ್, ಕಂದಾಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ನಕಲಿ ಮಾಲೀಕತ್ವದ ದಾಖಲೆ ಪಡೆದ ನಂತರ 1997 ರಲ್ಲಿ ಖಾಸಗಿ ವ್ಯಕ್ತಿಗಳಿಗೆ ಭೂಮಿಯನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ನಿವೃತ್ತ ಕಂದಾಯ ಅಧಿಕಾರಿ ನಿಶಾನ್ ಸಿಂಗ್ ವರ್ಷಗಳ ಹಿಂದೆ ದೂರು ದಾಖಲಿಸಿದ್ದರು, ಆದರೆ ಅಧಿಕಾರಿಗಳು ಈ ಸಮಸ್ಯೆಯನ್ನು ಮುಚ್ಚಿಹಾಕಲು ನಿರ್ಧರಿಸಿದ್ದರು. ನಿಶಾನ್ ಸಿಂಗ್ ಅವರ ಕಠಿಣ ಪ್ರಯತ್ನಗಳೇ ದುಷ್ಕೃತ್ಯವನ್ನು ಬೆಳಕಿಗೆ ತಂದಿವೆ.

ಹಲ್ವಾರಾ ವಾಯುಪಡೆ ನಿಲ್ದಾಣದ ಅಧಿಕಾರಿಗಳು 2021 ರಲ್ಲಿ ನಡೆದ ಭೂ ವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದಾರೆ. IAF ನ ದೂರಿನ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳಿಂದ ಯಾವುದೇ ಕ್ರಮ ಕೈಗೊಳ್ಳದಿದ್ದಾಗ, ಸಿಂಗ್ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಬಾಗಿಲು ತಟ್ಟಿದರು.

ಭೂಮಿಯ ಮೂಲ ಮಾಲೀಕರು 1991 ರಲ್ಲಿ ನಿಧನರಾದ ಮದನ್ ಮೋಹನ್ ಲಾಲ್ ಎಂದು ಸಿಂಗ್ ಹೇಳಿಕೊಂಡರು. ನಿಜವಾದ ಮಾಲೀಕರು 1947 ಕ್ಕಿಂತ ಮೊದಲು ದೆಹಲಿಗೆ ಹೋಗಿದ್ದರು ಎಂದು ಕಂಡುಬಂದಿದೆ. ಇಲ್ಲಿನ ಅಧಿಕಾರಿಗಳು ನಕಲಿ ದಾಖಲೆಗಳನ್ನು ಸಿದ್ಧಪಡಿಸಿ 1997 ರಲ್ಲಿ ಈ ಭೂಮಿಯನ್ನು ಮಾರಾಟ ಮಾಡಿದರು. ನಮ್ಮ ಕಂದಾಯ ಅಧಿಕಾರಿಗಳು ಈ ವಿಷಯವನ್ನು ಮುಚ್ಚಿಹಾಕುತ್ತಲೇ ಇದ್ದರು ಮತ್ತು ಭಾರಿ ಲಂಚವನ್ನು ಪಡೆಯುತ್ತಲೇ ಇದ್ದರು ಎಂದು ಅವರು ತಿಳಿಸಿದ್ದಾರೆ.

ಕೊನೆಗೆ, ಹೈಕೋರ್ಟ್ ಹಸ್ತಕ್ಷೇಪದ ನಂತರ, ತಾಯಿ-ಮಗನ ವಿರುದ್ಧ ಕುಲ್ಗರ್ಹಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು. ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯ ಪ್ರಕಾರ, 1958-59 ರ ಕಂದಾಯ ದಾಖಲೆಗಳ ಪ್ರಕಾರ ಭೂಮಿ IAF ವಶದಲ್ಲಿದೆ. ಮೇ 2025 ರಲ್ಲಿ ಭೂಮಿಯನ್ನು ರಕ್ಷಣಾ ಸಚಿವಾಲಯಕ್ಕೆ ಹಿಂದಿರುಗಿಸಲಾಗಿದ್ದರೂ ಸಹ, ಆಪಾದಿತ ವಂಚನೆಯ ತನಿಖೆ ನಡೆಯುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read