ಚಿಕ್ಕಬಳ್ಳಾಪುರ: ವೃದ್ಧ ತಾಯಿಗೆ ಬರುತ್ತಿದ್ದ ಪಿಂಚಣಿ ಹಣದ ವಿಚಾರಕ್ಕೆ ಮೂವರು ಸಹೋದರರ ನಡುವೆ ಆರಂಭವಾದ ಜಗಳ ಅಣ್ಣನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿಕ್ಕಬಳ್ಳಪೌರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ.
ನರಸಿಂಹಮೂರ್ತಿ (45) ಕೊಲೆಯಾದ ಸಹೋದರ. ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ಮೇಳ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ರಾಮಾಂಜಿ (39) ಹಾಗೂ ಗಂಗಾಧರಪ್ಪ (39) ಎಂಬ ಇಬ್ಬರು ಸಹೋದರರು ಅಣ್ಣ ನರಸಿಂಹಮೂರ್ತಿಯನ್ನೇ ಕೊಲೆಗೈದಿದ್ದಾರೆ. ಇವರ ತಂದೆ ಬೆಸ್ಕಾಂ ಉದ್ಯೋಗಿಯಾಗಿದ್ದರು. ಆದರೆ ಕೆಲ ವರ್ಷಗಳ ಹಿಂದೆ ತಂದೆ ಸಾಅವನ್ನಪ್ಪಿದ್ದರು. ಅವರ ಪಿಂಚಣಿ ಹಣ ತಾಯಿಗೆ ಬರುತ್ತಿತ್ತು. ತಾಯಿಗೆ ವಯಸ್ಸಾಗಿತ್ತು. ಆದರೂ ಪಿಂಚಣಿ ಹಣವನ್ನು ಕೂಡಿಡುತ್ತಿದ್ದರು. ವಯಸ್ಸಾದ ತಾಯಿ ಬಳಿ ಇರುವ ಪಿಂಚಣಿ ಹಣದ ಮೇಲೆ ಮೂವರು ಮಕ್ಕಳಿಗೆ ಕಣ್ಣುಬಿದ್ದಿದೆ. ಈ ಹಣಕ್ಕಾಗಿ ಅಣ್ಣ-ತಮ್ಮಂದಿರ ನಡುವೆ ಜಗಳ ಆರಂಭವಾಗಿ ವಿಕೋಪಕ್ಕೆ ತಿರುಗಿದೆ. ರಾಮಾಂಜಿ ಹಾಗೂ ಗಂಗಾಧರಪ್ಪ ಇಬ್ಬರೂ ಅಣ್ಣನನ್ನು ದೊಣ್ಣೆಯಿಂದ ಹೊಡೆದು ಹತ್ಯೆಗೈದಿದ್ದಾರೆ.
ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.