34 ನೇ ವಯಸ್ಸಿಗೇ ಅಜ್ಜಿಯಾದ ನಟಿ…! ಮಗ ತನ್ನನ್ನೇ ಅನುಸರಿಸಿದ್ದಾನೆಂದು ತಮಾಷೆ

ತನ್ನ 34 ನೇ ವಯಸ್ಸಿನಲ್ಲೇ ಆಕೆ ಅಜ್ಜಿಯಾಗಿದ್ದಾಳೆ. ಸಿಂಗಾಪುರದ ಸಾಮಾಜಿಕ ಜಾಲತಾಣ ಪ್ರಭಾವಿಯೊಬ್ಬರು 34 ವಯಸ್ಸಲ್ಲೇ ಅಜ್ಜಿಯಾದ ನಂತರ ಚರ್ಚೆಯನ್ನು ಹುಟ್ಟುಹಾಕಿದೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಶಿರ್ಲಿ ಲಿಂಗ್ ಕಳೆದ ವರ್ಷ ತನ್ನ 17 ವರ್ಷದ ಮಗ ತಂದೆಯಾದಾಗ ತನ್ನ ಮೊದಲ ಮೊಮ್ಮಗನನ್ನು ಸ್ವಾಗತಿಸಿದ್ದಾರೆ. ಗಮನಾರ್ಹವಾಗಿ ಚಿಕನ್ ಹಾಟ್ಪಾಟ್ ರೆಸ್ಟೋರೆಂಟ್ ನಡೆಸುತ್ತಿರುವ ಶಿರ್ಲಿ ಲಿಂಗ್ ಮೂರು ಬಾರಿ ಮದುವೆಯಾಗಿದ್ದಾರೆ ಮತ್ತು ಐದು ಮಕ್ಕಳನ್ನು ಹೊಂದಿದ್ದಾರೆ. ತಮ್ಮ 17 ನೇ ವಯಸ್ಸಿನಲ್ಲೇ ಆಕೆ ಮೊದಲ ಮಗುವಿಗೆ ಜನ್ಮ ನೀಡಿದ್ದಳು.

ಮಾರ್ಚ್‌ನಲ್ಲಿ ಪೋಸ್ಟ್ ಮಾಡಿದ ಆಕೆಯ ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ, ಶಿರ್ಲಿ ಲಿಂಗ್ ತನ್ನ ಚಿಕ್ಕ ವಯಸ್ಸಿನಲ್ಲೇ ಅಜ್ಜಿಯಾದ ಅನುಭವವನ್ನು ಚರ್ಚಿಸಿದ್ದಾರೆ. ಅದನ್ನು “ಒಳ್ಳೆಯದು ಮತ್ತು ಕೆಟ್ಟದು” ಎಂದು ಕರೆದಿರುವ ಆಕೆ ಕಳೆದ ವರ್ಷ ತನ್ನ ಹಿರಿಯ ಮಗನ ಗೆಳತಿ ಗರ್ಭಿಣಿಯಾಗಿದ್ದಾಳೆಂದು ತಿಳಿದಾಗ ಗಾಬರಿಯಾಗಲಿಲ್ಲವಂತೆ. ತನ್ನ ಮಗ 17 ನೇ ವಯಸ್ಸಿನಲ್ಲಿ ತಂದೆಯಾಗಲು ತನ್ನಿಂದ ಸ್ಫೂರ್ತಿ ಪಡೆದಿದ್ದಾನೆ ಎಂದು ತಮಾಷೆ ಮಾಡಿದರು.

”ಇತರ ಮಕ್ಕಳಿಗೆ ಹೋಲಿಸಿದರೆ ಹಿರಿಮಗ ಹೆಚ್ಚು ಕುತೂಹಲದಿಂದ ಕೂಡಿರುತ್ತಾನೆ. ಹಾಗಾಗಿ ಅವನು ತನ್ನ ಗೆಳತಿ ಗರ್ಭಿಣಿಯಾಗಿದ್ದಾಳೆ ಎಂದು ಹೇಳಿದಾಗ, ನೀನೀಗ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಜವಾಬ್ದಾರಿಯನ್ನು ನಿರ್ವಹಿಸಬೇಕೆಂದು ನಾನು ತಿಳಿಸಿದ್ದೆ” ಎಂದಿದ್ದಾರೆ.

“ನಾವು ಇಂತಹ ವಿಷಯವನ್ನು ಹೇಗೆ ನೋಡುತ್ತೀವಿ ಮತ್ತು ಅದನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ” ಎಂದು ಹೇಳಿದರು.

ಮತ್ತೊಂದು ವೀಡಿಯೊದಲ್ಲಿ, ತನ್ನ ಮಕ್ಕಳು ಚಿಕ್ಕ ವಯಸ್ಸಲ್ಲೇ ಮಕ್ಕಳನ್ನು ಹೊಂದುವುದಿಲ್ಲ ನಾನು ಪ್ರೋತ್ಸಾಹಿಸುವುದಿಲ್ಲ. ಏಕೆಂದರೆ ನಾನು ಚಿಕ್ಕ ವಯಸ್ಸಿನಲ್ಲೇ ತಾಯಿಯಾದ ಕಷ್ಟಗಳನ್ನು ತಿಳಿದಿದ್ದೇ. ಹಾಗಾಗಿ ಮಕ್ಕಳನ್ನು ಬೈಯುವುದಕ್ಕಿಂತ ಸಲಹೆ ಮತ್ತು ಬೆಂಬಲ ನೀಡಲು ಬಯಸುತ್ತೇನೆ ಎಂದಿದ್ದಾರೆ. ಕೆಲವರಂತೂ ಈಕೆ ತನ್ನ 53ನೇ ವಯಸ್ಸಿಗೆ ಮುತ್ತಜ್ಜಿಯಾಗಬಹುದೆಂದು ತಮಾಷೆ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ 20,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಶಿರ್ಲಿ ಲಿಂಗ್, 2022 ರಲ್ಲಿ ಸಿಂಗಾಪುರದ ಹಾಸ್ಯ ಚಲನಚಿತ್ರ ಆಹ್ ಗರ್ಲ್ಸ್ ಗೋ ಆರ್ಮಿಯಲ್ಲಿ ನಟಿಸಿದ ನಂತರ ಖ್ಯಾತಿ ಗಳಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read