ಪ್ರಿಯಕರನ ಜೊತೆ ವಿವಾಹಿತ ಮಹಿಳೆ ಎಸ್ಕೇಪ್; ಮೊಬೈಲ್ ಗೆ ಬಂದ ಸಂಬಳದ ಮೆಸೇಜ್ ನಿಂದ ಘಟನೆ ಬಹಿರಂಗ….!

ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ 29 ವರ್ಷದ ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಆಕೆಯ ಪತಿ ಹಗಲು ರಾತ್ರಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ, ಆದರೆ ಗಂಡನ ಮೊಬೈಲ್ ಗೆ ಬಂದ ಸಂದೇಶದಿಂದ ಪತ್ನಿಯ ಕಳ್ಳಾಟ ಬಯಲಾಗಿದೆ.

ತನ್ನ ಖಾತೆಗೆ ಸಂಬಳ ಬಂದಿರುವ ಮೆಸೇಜ್ ನೋಡಿದ ಗಂಡ ಬೆಚ್ಚಿಬಿದ್ದು ತಕ್ಷಣ ಪೊಲೀಸ್ ಠಾಣೆಗೆ ಹೋಗಿ ಮೆಸೇಜ್ ತೋರಿಸಿದರು. ಈ ಸಂದೇಶವು ಇಡೀ ಪ್ರಕರಣವನ್ನು ಬಯಲಿಗೆಳೆಯಲು ಕಾರಣವಾಯಿತು. ಪೊಲೀಸರ ಸೈಬರ್ ಸೆಲ್, ಸಂದೇಶವನ್ನು ಬಳಸಿಕೊಂಡು ಸ್ಥಳವನ್ನು ಪತ್ತೆಹಚ್ಚಿದ ನಂತರ ಮಹಿಳೆ ಮತ್ತು ಆಕೆಯ ಮೂವರು ಮಕ್ಕಳನ್ನು ಸೂರತ್‌ನಿಂದ ಕರೆತರಲಾಗಿದೆ.

ಶಿವಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ಮೊಹಾನಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೃಷ್ಣ ಪ್ರಸಾದ್ ಪ್ರಜಾಪತಿ ಅವರ ಪತ್ನಿ ಜೂನ್‌ನಲ್ಲಿ ತನ್ನ ಪ್ರಿಯಕರ ಮತ್ತು ಮೂವರು ಮಕ್ಕಳೊಂದಿಗೆ ಓಡಿ ಹೋಗಿದ್ದರು. ನಾಲ್ವರನ್ನು ಗುಜರಾತ್‌ನ ಸೂರತ್‌ನಿಂದ ವಶಪಡಿಸಿಕೊಳ್ಳಲಾಗಿದೆ. 29 ವರ್ಷದ ಅನಿತಾ ದೇವಿ, ಆಕೆಯ 12 ವರ್ಷದ ಮಗಳು ಪ್ರಿಯಾಂಕಾ, 8 ವರ್ಷದ ಮಗಳು ವಿಭಾ ಮತ್ತು 6 ವರ್ಷದ ಮಗ ಶಶಿಕಾಂತ್ ಅವರನ್ನು ಪೊಲೀಸರು ಮತ್ತೆ ಬಿಹಾರಕ್ಕೆ ಕರೆತಂದಿದ್ದಾರೆ. ಪತ್ನಿ ಮತ್ತು ಮಕ್ಕಳು ಇದ್ದಕ್ಕಿದ್ದಂತೆ ನಾಪತ್ತೆಯಾದ ನಂತರ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮದುವೆಯಾದ ಬಳಿಕ ತನ್ನ ಪತ್ನಿ ಶಿವಸಾಗರದ ಬ್ಯೂಟಿ ಪಾರ್ಲರ್‌ನಲ್ಲಿ ತರಬೇತಿ ಆರಂಭಿಸಿದ್ದು, ಅಲ್ಲಿ ಯುವಕನೊಬ್ಬನ ಸಂಪರ್ಕಕ್ಕೆ ಬಂದಿದ್ದಳು ಎಂದು ಪತಿ ಹೇಳಿಕೆ ನೀಡಿದ್ದರು. ಅವರು ಪರಸ್ಪರ ಪ್ರೀತಿಸಿ ಬಳಿಕ ಅವರ ಸಂಬಂಧ ತೀವ್ರವಾಗಿ ಬೆಳೆಯುತ್ತಿದ್ದಂತೆ ಆಕೆ ತನ್ನ ಮೂವರು ಮಕ್ಕಳೊಂದಿಗೆ ಸೂರತ್‌ಗೆ ಓಡಿಹೋಗಲು ನಿರ್ಧರಿಸಿದಳು. ಸೂರತ್ ಗೆ ತೆರಳಿ ಅಲ್ಲಿ ಅವರಿಬ್ಬರು ಗಂಡ -ಹೆಂಡತಿಯಂತೆ ವಾಸಿಸುತ್ತಿದ್ದರು. ಈ ವೇಳೆ ತನ್ನ ಪ್ರೇಮಿಗೆ ಜವಳಿ ಕಾರ್ಖಾನೆಯಲ್ಲಿ ಕೆಲಸ ಸಿಕ್ಕಿದ್ದು ಸಂಬಳ ಪಾವತಿಗೆ ಬ್ಯಾಂಕ್ ಖಾತೆ ಅಗತ್ಯವಿತ್ತು. ಹಾಗಾಗಿ ಆಕೆ ತನ್ನ ಪತಿಯ ಅಕೌಂಟ್ ನಂಬರ್ ನೀಡಿದ್ದಳು. ಆದರೆ ಬ್ಯಾಂಕ್ ಖಾತೆಗೆ ಪತಿಯ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ದು, ಈ ಬಗ್ಗೆ ಮಹಿಳೆಗೆ ಅರಿವಿರಲಿಲ್ಲ.

ಮೊದಲ ಸಂಬಳದ ಹಣ ಖಾತೆಗೆ ಜಮಾ ಆದಾಗ ಪತಿಯ ಮೊಬೈಲ್ ಗೆ ಸಂದೇಶ ರವಾನೆಯಾಗಿತ್ತು. ಈ ಸಂದೇಶದ ಆಧಾರದ ಮೇಲೆ, ಸೈಬರ್ ಸೆಲ್ ಅಧಿಕಾರಿಗಳು ಸ್ಥಳವನ್ನು ಪತ್ತೆ ಹಚ್ಚಿ ಆತನ ಪತ್ನಿ ಸೂರತ್‌ನಲ್ಲಿದ್ದಾರೆ ಎಂದು ಪತ್ತೆ ಮಾಡಿದರು. ನೊಂದ ಪತಿ ಕೂಡಲೇ ಸೂರತ್‌ಗೆ ರೈಲು ಹತ್ತಿದ. ಅಲ್ಲಿ ಮಕ್ಕಳು ಅವನನ್ನು ನೋಡಿ ಅಳಲು ಪ್ರಾರಂಭಿಸಿದರು. ತನ್ನ ಮಕ್ಕಳನ್ನು ಅಪ್ಪಿಕೊಂಡು ಸ್ಥಳೀಯ ಪೊಲೀಸರಿಗೆ ವ್ಯಕ್ತಿ ಮಾಹಿತಿ ನೀಡಿದ್ದಾನೆ. ನಂತರ ಪೊಲೀಸರು ಮಹಿಳೆಯನ್ನು ಬಿಹಾರಕ್ಕೆ ಕರೆತಂದಿದ್ದಾರೆ. ನ್ಯಾಯಾಲಯದಲ್ಲಿ ಹೇಳಿಕೆಗಳನ್ನು ದಾಖಲಿಸಲಾಗಿದೆ ಮತ್ತು ಮೂವರು ಮಕ್ಕಳು ಈಗ ರೋಹ್ತಾಸ್‌ನಲ್ಲಿ ತಮ್ಮ ತಂದೆಯೊಂದಿಗೆ ಇದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read