18ರ ಯುವಕನಿಗೆ ಮೂರು ಮಕ್ಕಳ ತಾಯಿ ಮೇಲೆ ಪ್ರೀತಿ….. ಓಡಿ ಹೋದವರಿಗೆ ಆದದ್ದೇನು….?

ಪ್ರೀತಿ ಕುರುಡು ಎನ್ನುವ ಮಾತಿಗೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಬಿಹಾರದ ಗೋಪಾಲ್ ಗಂಜ್ ನಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. 18 ವರ್ಷದ ಯುವಕನೊಬ್ಬ ಮೂರು ಮಕ್ಕಳ ತಾಯಿಯನ್ನು ಪ್ರೀತಿಸಿದ್ದಾನೆ. ಅಷ್ಟೇ ಅಲ್ಲ ಆ ಮಹಿಳೆ ಜೊತೆ ಊರು ಬಿಟ್ಟಿದ್ದಾನೆ.

ಮಹಿಳೆ ತಾವೆ ಹೆಸರಿನ ಊರಿಗೆ ಸೇರಿದವಳು. ಆಕೆಗೆ ಮೂವರು ಮಕ್ಕಳು. ಪತಿ ವಿದೇಶದಲ್ಲಿ ಕೆಲಸ ಮಾಡುವ ಕಾರಣ ಮಹಿಳೆ ತವರಿನಲ್ಲಿ ವಾಸವಾಗಿದ್ದಳು. ಹುಡುಗ ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದಾನೆ. ಇಬ್ಬರ ಮಧ್ಯೆ ನಿಧಾನವಾಗಿ ಪ್ರೀತಿ ಶುರುವಾಗಿದೆ. ಮನೆಯವರಿಗೆ ತಿಳಿಯದಂತೆ ಇಬ್ಬರು ಆಗಾಗ ಭೇಟಿಯಾಗಿದ್ದಾರೆ. ಅಂಗಡಿಯಲ್ಲಿ ವ್ಯಾಪಾರ ಸರಿಯಾಗಿ ನಡೆಯದ ಕಾರಣ ಕೆಲಸಕ್ಕೆ ಬೇರೆ ರಾಜ್ಯಕ್ಕೆ ಹೋಗ್ತೇನೆಂದು ಹುಡುಗ ಮನೆ ಬಿಟ್ಟಿದ್ದಾನೆ. ಇತ್ತ ಮಹಿಳೆ ಕೂಡ ತನ್ನ ಮೂರು ಮಕ್ಕಳ ಜೊತೆ ನಾಪತ್ತೆಯಾಗಿದ್ದಾಳೆ.

ಇಬ್ಬರು ಮೊದಲು ತಾವೆ ದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ನಂತ್ರ ತಾವೆ ಅರಣ್ಯ ಪ್ರದೇಶದಲ್ಲಿ ವಾಸ ಶುರು ಮಾಡಿದ್ದಾರೆ. ಹುಡುಗನ ಕಡೆಯವರು ಇದನ್ನು ನೋಡಿದ್ದಲ್ಲದೆ ಇಬ್ಬರಿಗೂ ಒದೆ ನೀಡಿದ್ದಾರೆ. ವಿಷ್ಯ ತಿಳಿದ ಮಹಿಳೆ ಮನೆಯವರು ಕೂಡ ಅಲ್ಲಿಗೆ ಬಂದಿದ್ದಾರೆ. ಈ ಪ್ರಕರಣ ಸದ್ಯ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಎರಡೂ ಕುಟುಂಬದ ಜೊತೆ ಪೊಲೀಸರು ಮಾತುಕತೆ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read