ಮಗುವಿಗೆ ಚಿತ್ರಹಿಂಸೆ ನೀಡಿದ ತಾಯಿ, ಪ್ರಿಯಕರ ಅರೆಸ್ಟ್

ಬೆಂಗಳೂರು: ಮಗುವಿಗೆ ಚಿತ್ರ ಹಿಂಸೆ ನೀಡಿದ ತಾಯಿ ಮತ್ತು ಪ್ರಿಯಕರನನ್ನು ಗಿರಿನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ.

ವೀರಭದ್ರ ನಗರ ನಿವಾಸಿ ಶಾರೀನ್ ಮತ್ತು ಆಕೆಯ ಪ್ರಿಯಕರ ದಿನೇಶ್ ಬಂಧಿತರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ನಾಗರತ್ನ ಹಾಗೂ ರಾಜೇಶ್ವರಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಪತಿಯಿಂದ ಪ್ರತ್ಯೇಕವಾಗಿರುವ ಶಾರೀನ್ ಪ್ರಿಯಕರನೊಂದಿಗೆ ಸೇರಿ ಮಗುವಿನ ಮೇಲೆ ಹಲ್ಲೆ ಮಾಡಿ ಮನೆಯಲ್ಲಿ ಕೂಡಿಹಾಕಿ ಚಿತ್ರ ಹಿಂಸೆ ನೀಡಿದ್ದರು. ಮಗುವಿನ ಮರ್ಮಾಂಗ ಸೇರಿ ದೇಹದ ಹಲವು ಕಡೆ ಗಾಯದ ಗುರುತುಗಳಿವೆ. ಸ್ಥಳೀಯರು ಇದನ್ನು ಗಮನಿಸಿ ಮಗುವನ್ನು ರಕ್ಷಿಸಿದ್ದು, ಗಿರಿನಗರ ಠಾಣೆ ಪೊಲೀಸರ ಮೂಲಕ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದರು. ಮಕ್ಕಳ ಕಲ್ಯಾಣ ಸಮಿತಿ ಮಗುವನ್ನು ಮಾತನಾಡಿಸಿದಾಗ ತನ್ನ ತಾಯಿ ಮತ್ತು ಆಕೆಯ ಪ್ರಿಯಕರ ಚಿತ್ರ ಹಿಂಸೆ ನೀಡಿದ ಬಗ್ಗೆ ಹೇಳಿಕೊಂಡಿದೆ. ಪ್ರಕರಣವನ್ನು ಮಕ್ಕಳ ರಕ್ಷಣಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ನಿಮ್ಹಾನ್ಸ್ ಸಮೀಪದ ಶಿಶುಮಂದಿರದಲ್ಲಿ ಮಗುವನ್ನು ಭೇಟಿ ಮಾಡಿದೆ. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read