ಹೆತ್ತ ಮಗುವಿಗೆ ಹಾಲುಣಿಸಲಾಗದೇ ವ್ಯಥೆ: ಶಿಶುವಿನೊಂದಿಗೆ ತಾಯಿ ಆತ್ಮಹತ್ಯೆ

ಶಿವಮೊಗ್ಗ: ಹೆತ್ತ ಮಗುವಿಗೆ ಹಾಲುಣಿಸಲು ಎದೆ ಹಾಲು ಬರುತ್ತಿಲ್ಲವೆಂದು ಮನನೊಂದು ಮಹಿಳೆ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ಶನಿವಾರ ತಡರಾತ್ರಿ ನೀರಿನ ಹೊಂಡಕ್ಕೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 28 ವರ್ಷದ ಶಾಂತಾ ಹಾಗೂ 40 ದಿನದ ಹೆಣ್ಣು ಮಗು ಮೃತಪಟ್ಟಿದ್ದಾರೆ. ಸೊರಬ ತಾಲೂಕಿನ ಜಡ್ಡಿಹಳ್ಳಿ ಗ್ರಾಮದ ಮಧು ಜೊತೆಗೆ ಶಾಂತಾ ಮದುವೆಯಾಗಿದ್ದು, ಚೊಚ್ಚಲ ಹೆರಿಗೆಗೆ ತವರು ಮನೆ ಕುಪ್ಪಗಡ್ಡೆಗೆ ಬಂದಿದ್ದರು. 40 ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಎದೆ ಹಾಲು ಬರುತ್ತಿಲ್ಲ ಮಗು ಸೊರಗುತ್ತಿದೆ ಎಂದು ಮಾನಸಿಕವಾಗಿ ನೊಂದು ಮಗುವಿನೊಂದಿಗೆ ನೀರಿನ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಯಲ್ಲಿ ತಾಯಿ, ಮಗು ಇಲ್ಲದಿರುವುದನ್ನು ಗಮನಿಸಿದ ಪೋಷಕರು ಹುಡುಕಾಟ ನಡೆಸಿದ್ದಾರೆ. ಹೊಂಡದಲ್ಲಿ ಮಗು ತೇಲುತ್ತಿರುವುದು ಕಂಡುಬಂದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ತಾಯಿ, ಮಗುವಿನ ಶವ ನೀರಿನಿಂದ ಹೊರ ತೆಗೆದಿದ್ದಾರೆ. ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read