BREAKING NEWS: ಮಾಸ್ಕೋಗೆ ತೆರಳುತ್ತಿದ್ದ ಭಾರತೀಯ ವಿಮಾನ ಅಫ್ಘಾನಿಸ್ತಾನದಲ್ಲಿ ಪತನ

ನವದೆಹಲಿ: ಭಾರತೀಯ ವಾಣಿಜ್ಯ ವಿಮಾನ ಪತನಗೊಂಡಿದೆ. ಮಾಸ್ಕೋಗೆ ತೆರಳುತ್ತಿದ್ದ ಭಾರತೀಯ ವಾಣಿಜ್ಯ ವಿಮಾನ ಅಫ್ಘಾನಿಸ್ತಾನದ ಬಡಾಕ್ಷಣ್‌ ನಲ್ಲಿ ಪತನಗೊಂಡಿದೆ.

ಅಫ್ಘಾನಿಸ್ತಾನದ ಈಶಾನ್ಯ ಬಡಾಕ್ಷನ್ ಪ್ರಾಂತ್ಯದಲ್ಲಿ ಶನಿವಾರ(ಜ. 20) ರಾತ್ರಿ ಭಾರತೀಯ ವಾಣಿಜ್ಯ ವಿಮಾನ ಪತನಗೊಂಡಿದೆ ಎಂದು ಅಫ್ಘಾನ್ ಮಾಧ್ಯಮ ವರದಿ ಮಾಡಿದೆ ಮತ್ತು ತಾಲಿಬಾನ್ ಅಧಿಕಾರಿ ದೃಢಪಡಿಸಿದರು.

ಆದರೆ, ಅಪಘಾತ ಸಂಭವಿಸಿದ ವಿಮಾನದ ಮೂಲವನ್ನು ತಕ್ಷಣವೇ ಪರಿಶೀಲಿಸಲಾಗಿಲ್ಲ.

ಭಾರತದ ಯಾವುದೇ ಸಾಮಾನ್ಯ ವಿಮಾನಗಳು ಆ ಮಾರ್ಗದಲ್ಲಿ ಹಾರುವುದಿಲ್ಲ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಇದು ಖಾಸಗಿ ವಿಮಾನವೇ ಅಥವಾ ಚಾರ್ಟರ್ಡ್ ವಿಮಾನವೇ ಎಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read