ಬೇಸಿಗೆ ಕಾಲದಲ್ಲಿ ಜಾಸ್ತಿ ಮಸಾಲೆಯಿಂದ ಕೂಡಿದ ಆಹಾರ ಪದಾರ್ಥಗಳನ್ನು ಸೇವಿಸಲು ಆಗುವುದಿಲ್ಲ. ಅದೂ ಅಲ್ಲದೇ ಅಡುಗೆ ಮಾಡುವುದಕ್ಕೆ ಯಾವುದೇ ತರಕಾರಿ ಇಲ್ಲದಿದ್ದಾಗ ಒಂದು ಕಪ್ ಮೊಸರು ಇದ್ದರೆ ಸಾಕು ರುಚಿಕರವಾದ ಮೊಸರನ್ನ ಮಾಡಿಕೊಂಡು ಸವಿಯಬಹುದು.
ಬೇಕಾಗುವ ಸಾಮಾಗ್ರಿಗಳು:
¾ ಕಪ್-ಮೊಸರು, ಅನ್ನ-1 ಕಪ್, ತುಪ್ಪ-1 ಟೀ ಸ್ಪೂನ್, ಸಾಸಿವೆ-1/4 ಟೀ ಸ್ಪೂನ್, ಗೋಡಂಬಿ-4, ದ್ರಾಕ್ಷಿ-8, ¼ ಟೀ ಸ್ಪೂನ್-ಉದ್ದಿನಬೇಳೆ, ಕರಿಬೇವು-8, ಉಪ್ಪು ರುಚಿಗೆ ತಕ್ಕಷ್ಟು, ದಾಳಿಂಬೆ-2 ಟೇಬಲ್ ಸ್ಪೂನ್, ಕೊತ್ತಂಬರಿಸೊಪ್ಪು-2 ಟೇಬಲ್ ಸ್ಪೂನ್-ಒಣ ಮೆಣಸು-1.
ಮಾಡುವ ವಿಧಾನ:
ಒಂದು ಒಗ್ಗರಣೆ ಪಾತ್ರೆಗೆ ತುಪ್ಪ ಹಾಕಿ ಅದು ಬಿಸಿಯಾಗುತ್ತಲೆ ಸಾಸಿವೆ, ಉದ್ದಿನಬೇಳೆ ಹಾಕಿ ನಂತರ ಅದಕ್ಕೆ ಕರಿಬೇವು, ಗೋಡಂಬಿ, ಮೆಣಸಿನಕಾಯಿ, ದ್ರಾಕ್ಷಿ ಹಾಕಿ. ನಂತರ ಗ್ಯಾಸ್ ಆಫ್ ಮಾಡಿ ಮಾಡಿಟ್ಟುಕೊಂಡ ಒಗ್ಗರಣೆಯನ್ನು ಅನ್ನಕ್ಕೆ ಹಾಕಿ. ನಂತರ ಇದಕ್ಕೆ ದಾಳಿಂಬೆ, ಕೊತ್ತಂಬರಿಸೊಪ್ಪನ್ನು ಹಾಕಿ. ರುಚಿಕರವಾದ ಮೊಸರನ್ನ ಸವಿಯಲು ಸಿದ್ಧವಾಗುತ್ತದೆ.