ಕಲಬುರಗಿ: ಸಹೋದ್ಯೋಗಿ ಮುಸ್ಲಿಂ ಯುವತಿಗೆ ಡ್ರಾಪ್ ನೀಡಿದ ಕಾರಣಕ್ಕೆ ನೈತಿಕ ಪೊಲೀಸ್ ಗಿರಿ ತೋರಿಸಿ ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ್ದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿಯ ಮೊಹಮ್ಮದ್ ಸಲ್ಮಾನ್ ಅಲಿ, ಮಹಮ್ಮದ್ ಆದಿಲ್, ಮೊಹಮ್ಮದ್ ರೆಹಾನ್ ಅಲಿ, ಮಹಮ್ಮದ್ ಉಜೈರ್ ಅಹಮದ್ ಫರೀದಿ, ಮೊಹಮ್ಮದ್ ಫೈಜ್ ನಬಿಲಾಲ್, ಮಹಮದ್ ಆಸಿಫ್ ಮಿಯಾನ್ ಬಂದಿತ ಆರೋಪಿಗಳಾಗಿದ್ದಾರೆ.
ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿರುವ ಕಲಬುರಗಿ ಸಾಯಿ ಮಂದಿರ ಬಡಾವಣೆ ನಿವಾಸಿ ಬೈಲಪ್ಪ ಖ್ಯಾಸ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಒಂದೇ ಆಸ್ಪತ್ರೆಯಲ್ಲಿ ಬೈಲಪ್ಪ ಮತ್ತು ಮುಸ್ಲಿಂ ಯುವತಿ ಕೆಲಸ ಮಾಡುತ್ತಿದ್ದು, ತುರ್ತು ಕಾರ್ಯವಿದೆ, ಡ್ರಾಪ್ ಮಾಡಿ ಎಂದು ಯುವತಿ ಕೇಳಿಕೊಂಡಿದ್ದರಿಂದ ಬೈಲಪ್ಪ ಡ್ರಾಪ್ ನೀಡಿದ್ದರು.
ಈ ವೇಳೆ ಯುವತಿಯನ್ನು ಬೈಕ್ ನಿಂದ ಕೆಳಗಿಳಿಸಿದ ಮುಸ್ಲಿಂ ಯುವಕರು ಬೈಲಪ್ಪನ ಮೇಲೆ ಹಲ್ಲೆ ಮಾಡಿದ್ದರು, ಎಂ.ಬಿ. ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.