ಬೆಂಗಳೂರು: ಮೊಂಥಾ ಚಂಡಮಾರುತದಿಂದಾಗಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಚಂಡಮಾರುತದ ಪರಿಣಾಮ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.
ಮೊಂಥಾ ಚಂಡಮಾರುತದ ಎಫೆಕ್ಟ್ ನಿಂದಾಗಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಗಾಳಿ, ಮಳೆಯಾಗುತ್ತಿದ್ದು, ಬೆಂಗಳೂರಿನಿಂದ ಹೊರಡಬೇಕಿದ್ದ ರೈಲು ಸಂಚಾರಗಳಲ್ಲಿ ವಿಳಂಬವಾಗಿದೆ.
ರೈಲುಗಳು 12 ಗಂಟೆಗಳ ಕಾಲ ತಡವಾಗಿ ಸಂಚರಿಸಲಿವೆ. ಆಂಧ್ರದ ಕಾಕಿನಾಡದಿಂದ ಬೆಂಗಳೂರಿಗೆ ಬರುತ್ತಿದ್ದ ಎಕ್ಸ್ ಪ್ರೆಸ್ ರೈಲು ರದ್ದಾಗಿದೆ. ಕಾಕಿನಾಡ-ಎಸ್ ಎಂ ವಿಟಿ ಬೆಂಗಳೂರು ಎಕ್ಸ್ ಪ್ರೆಸ್ ರೈಲು ರದ್ದಾಗಿದೆ. ಬೆಂಗಳೂರು-ನಾಗೇರ್ ಕಾಯಲ್ ರೈಲು ಸಂಚಾರ ಕೂಡ ರದ್ದಾಗಿದೆ. ಇನ್ನು ಕೆಲ ರೈಲುಗಳ ವೇಳಾಪಟ್ಟಿಯನ್ನು ಬದಲಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಮೊಂಥಾ ಚಂಡಮಾರುತ ಆಂಧ್ರ ಕರಾವಳಿಗೆ ಇಂದು ಸಂಜೆ ಅಪ್ಪಳಿಸಲಿದೆ. ಚಂಡಮಾರುತ ಅಪ್ಪಳಿಸುವ ಮುನ್ನವೇ ಆಂಧ್ರಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಕಾಕಿನಾಡದಿಂದ 450 ಕಿ.ಮೀ ದೂರದಲ್ಲಿರುವ ಚಂಡಮಾರುತ ಇಂದು ಸಂಜೆ ಕಾಕಿನಾಡ ಕರಾವಳಿಗೆ ಬಡಿಯಲಿದೆ. ಆಂಧ್ರದ ಕರಾವಳಿಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.
