ರೈತರಿಗೆ ಶುಭ ಸುದ್ದಿ: ಈ ಬಾರಿ ಸಾಮಾನ್ಯ ಮುಂಗಾರು; ಹವಾಮಾನ ಇಲಾಖೆ ಮಾಹಿತಿ

ನವದೆಹಲಿ: ಈ ಬಾರಿ ಸಾಮಾನ್ಯ ಮುಂಗಾರು ಇರಲಿದೆ ಎಂದು ರೈತರಿಗೆ ಹವಾಮಾನ ಇಲಾಖೆ ಶುಭ ಸುದ್ದಿ ನೀಡಿದೆ. ಸ್ಕೈಮೇಟ್ ವೆದರ್ ಮುಂಗಾರು ಕೊರತೆಯಾಗಲಿದೆ ಎಂಬ ಮಾಹಿತಿ ನೀಡಿದ ಬೆನ್ನಲ್ಲೇ ಹವಾಮಾನ ಇಲಾಖೆ ಶುಭ ಸಮಾಚಾರ ನೀಡಿದ್ದು, ಎಲ್ ನೀನೋ ಪರಿಣಾಮ ಇರುವುದಿಲ್ಲ. ವಾಡಿಕೆಯಂತೆ ಈ ಬಾರಿಯೂ ಸಾಮಾನ್ಯ ಮುಂಗಾರು ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂಗಾರು ಮಳೆ ದೇಶದ ರೈತರ ಜೀವನಾಡಿಯಾಗಿದೆ. ಸಾಮಾನ್ಯ ಮುಂಗಾರು ಮಳೆಯಾಗಲಿದ್ದು ಮಳೆ ಕೊರತೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ಹೇಳಿರುವುದರಿಂದ ರೈತರಲ್ಲಿ ಹೊಸ ಭರವಸೆ ಮೂಡಿದಂತಾಗಿದೆ.

ಜೂನ್ ನಿಂದ ಸೆಪ್ಟಂಬರ್ ಅವಧಿಯಲ್ಲಿ ದೀರ್ಘಕಾಲಿನ ಸರಾಸರಿಯ ಶೇಕಡ 96 ರಷ್ಟು ಮಳೆಯಾಗಲಿದೆ. ದೇಶಾದ್ಯಂತ ಸರಾಸರಿ 87 ಸೆಂಟಿಮೀಟರ್ ಮಳೆ ಸುರಿಯಲಿದೆ ಎಂದು ಭೂ ವಿಜ್ಞಾನ ಕಾರ್ಯದರ್ಶಿ ಎಂ. ರವಿಚಂದ್ರನ್ ಹೇಳಿದ್ದಾರೆ.

ವಾಡಿಕೆಗಿಂತ ಹೆಚ್ಚು ಮಳೆ ಆಗುವ ಸಾಧ್ಯತೆ 67ರಷ್ಟು ಇದೆ. ದಕ್ಷಿಣ ಭಾರತ, ಪೂರ್ವ ಮಧ್ಯ ಭಾರತ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ವಾಡಿಕೆಯ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಸಂಸ್ಥೆ ಮಹಾ ನಿರ್ದೇಶಕ ಎಂ. ಮೊಹಾಪಾತ್ರ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read