ವಿಡಿಯೋ: ದೇಗುಲಕ್ಕೆ ಭೇಟಿ ನೀಡಿ ದೇವರಿಗೆ ದೀರ್ಘದಂಡ ನಮಸ್ಕಾರ ಮಾಡಿದ ಮಂಗಣ್ಣ

ದೇವಸ್ಥಾನವೊಂದಕ್ಕೆ ತೆರಳಿ ದೇವರಿಗೆ ಕೈ ಮುಗಿಯುತ್ತಿರುವ ಕೋತಿಯೊಂದರ ಹಳೆಯ ವಿಡಿಯೋ ಈಗ ಮತ್ತೊಮ್ಮೆ ವೈರಲ್ ಆಗಿದೆ. ಟ್ವಿಟರ್‌ ಬಳಕೆದಾರ ಸಾತ್ವಿಕ್ ಸೌಲ್ ಅವರು ಈ ವಿಡಿಯೋ ಶೇರ್‌ ಮಾಡಿದ್ದಾರೆ.

ಗುಡ್ಡೆಯೊಂದನ್ನು ಏರಿ ದೇಗುಲದ ಒಳಾಂಗಣಕ್ಕೆ ಬರುವ ಕೋತಿ ದೇವರ ಮುಂದೆ ವಿನಮ್ರವಾಗಿ ತಲೆಬಾಗಿ ನಮಸ್ಕರಿಸುವ ಈ ವಿಡಿಯೋಗೆ ಎರಡು ಲಕ್ಷ ವೀಕ್ಷಣೆಗಳು ಸಿಕ್ಕಿವೆ.

ಈ ಕೋತಿ ಪ್ರತಿ ರಾತ್ರಿ ದೇವಸ್ಥಾನಕ್ಕೆ ಬಂದು ಹೀಗೆ ಕೈ ಮುಗಿಯುವುದಾಗಿ ವಿಡಿಯೋ ರೆಕಾರ್ಡ್ ಮಾಡಿದ ವ್ಯಕ್ತಿ ಹೇಳಿಕೊಂಡಿದ್ದಾರೆ. ಅಯೋಧ್ಯೆಯಲ್ಲಿರುವ ಈ ದೇಗುಲಕ್ಕೆ ಹೀಗೆ ಬಂದ ಕೋತಿಯು ಪರಮ ದೈವ ಭಕ್ತನ ಹಾಗೆಯೇ ದೀರ್ಘ ದಂಡ ನಮಸ್ಕಾರ ಮಾಡಿ ಭಕ್ತಿಯಲ್ಲಿ ಲೀನವಾಗುವುದನ್ನು ನೋಡಿದ ಆಸ್ತಿಕ ನೆಟ್ಟಿಗರಿಗೆ ಭಾರೀ ಆನಂದವಾಗಿದೆ.

ವಿಡಿಯೋಗೆ ಪ್ರತಿಕ್ರಿಯಿಸಿ ಕಾಮೆಂಟ್ ಮಾಡಿದ ನೆಟ್ಟಿಗರಿಂದ ’ಜೈ ಶ್ರೀರಾಮ್… ಹರ ಹರ ಮಹಾದೇವ’ ಘೋಷಗಳು ಮೊಳಗಿವೆ.

https://twitter.com/satviksoul/status/1635592184031498240?ref_src=twsrc%5Etfw%7Ctwcamp%5Etweetembed%7Ctwterm%5E1635592184031498240%7Ctwgr%5E76ec151fd9206e262e64907279ebdd3ba9107e67%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fmonkey-visits-a-temple-and-seeks-blessings-old-video-goes-viral-2346908-2023-03-15

https://twitter.com/DPmohapatra6/status/1635799048392175617?ref_src=twsrc%5Etfw%7Ctwcamp%5Etweetembed%7Ctwterm%5E1635799048392175617%7Ctwgr%5E76ec151fd9206e262e64907279ebdd3ba9107e67%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fmonkey-visits-a-temple-and-seeks-blessings-old-video-goes-viral-2346908-2023-03-15

https://twitter.com/natturaja/status/1635674911896219653?ref_src=twsrc%5Etfw%7Ctwcamp%5Etweetembed%7Ctwterm%5E1635674911896219653%7Ctwgr%5E76ec151fd9206e262e64907279ebdd3ba9107e67%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fmonkey-visits-a-temple-and-seeks-blessings-old-video-goes-viral-2346908-2023-03-15

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read