Viral Video | ಕನ್ನಡಕ ಕಿತ್ತುಕೊಂಡ ಕೋತಿ; ಕ್ಷಣಮಾತ್ರದಲ್ಲಿ ವರ್ಕೌಟ್ ಆಯ್ತು ಮಹಿಳೆಯ ಪ್ಲಾನ್

ಪ್ರವಾಸಿ ಸ್ಥಳಗಳಲ್ಲಿ ಕೋತಿಗಳು ಪ್ರವಾಸಿಗರ ಅಮೂಲ್ಯ ವಸ್ತುಗಳನ್ನು ಕಿತ್ತುಕೊಂಡರೆ ಗಾಬರಿಯಾಗೋದು ಸಾಮಾನ್ಯ. ಆದರೆ ಇಂತಹ ಸಂದರ್ಭದಲ್ಲಿ ತುಂಬಾ ಬುದ್ದಿವಂತಿಕೆಯಿಂದ ಅವುಗಳನ್ನು ಕ್ಷಣ ಮಾತ್ರದಲ್ಲಿ ವಾಪಸ್ ಪಡೆಯುವುದು ಕೂಡ ಮುಖ್ಯವಾಗುತ್ತದೆ. ಇಂತಹ ಕೆಲಸವನ್ನ ಮಹಿಳೆಯೊಬ್ಬರು ಬುದ್ಧಿವಂತಿಕೆಯಿಂದ ಮಾಡಿದ್ದು ಅವರ ನಡೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು ಹಲವು ಮೀಮ್ಸ್ ಗಳಿಗೂ ಆಹಾರವಾಗಿದೆ.

ಕನ್ನಡಕವನ್ನು ಹಾಕಿಕೊಂಡು ವ್ಯಕ್ತಿಯೊಬ್ಬರು ನಿಧಾನವಾಗಿ ಮೆಟ್ಟಿಲುಗಳನ್ನು ಹತ್ತಿ ಬರುತ್ತಿರುತ್ತಾರೆ. ಈ ವೇಳೆ ಕೋತಿಯು ವೇಗವಾಗಿ ಅವರು ಹಾಕಿದ್ದ ಕನ್ನಡಕವನ್ನು ಕಿತ್ತುಕೊಳ್ಳುತ್ತದೆ. ಕುತೂಹಲದಿಂದ ಕನ್ನಡಕವನ್ನು ಹತ್ತಿರದಿಂದ ಪರಿಶೀಲಿಸುತ್ತದೆ. ಸ್ವಲ್ಪ ಸಮಯದ ನಂತರ ಮಂಗಗಳ ನಡವಳಿಕೆಯ ಬಗ್ಗೆ ಚೆನ್ನಾಗಿ ತಿಳಿದಿರುವ ಓರ್ವ ಮಹಿಳೆ ಕೋತಿಯನ್ನು ಮೀರಿಸಲು ಯೋಜನೆಯೊಂದನ್ನ ಮಾಡುತ್ತಾರೆ.

ಮಹಿಳೆಯು ಬೆರಳೆಣಿಕೆಯಷ್ಟು ರುಚಿಕರವಾದ ಹಣ್ಣುಗಳನ್ನು ಕೋತಿಗೆ ನೀಡಿ ಅದರ ಗಮನವನ್ನು ಹಣ್ಣಿನ ಕಡೆಗೆ ಸೆಳೆಯುತ್ತಾರೆ. ಆಕರ್ಷಣೀಯ ತಿಂಡಿಗೆ ಕೋತಿ ವಿಚಲಿತಗೊಂಡಾಗ, ಮಹಿಳೆ ಕನ್ನಡಕವನ್ನು ಎಚ್ಚರಿಕೆಯಿಂದ ಮರುಪಡೆಯುತ್ತಾಳೆ. ಮಹಿಳೆಯ ವೇಗದ ಆಲೋಚನೆ ಮತ್ತು ಸಾಮರ್ಥ್ಯದಿಂದ ವ್ಯಕ್ತಿ ಆಶ್ಚರ್ಯಚಕಿತರಾಗುತ್ತಾರೆ. ಈ ವಿಡಿಯೋ ವೈರಲ್ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read