ಮೋನಾಲಿಸಾ ಭೋಸ್ಲೆ, “ಮಹಾ ಕುಂಭ ಮೇಳದ ಹುಡುಗಿ” ಎಂದು ವೈರಲ್ ಆದ ಯುವತಿ, ಇದೀಗ ತಮ್ಮ ಜೀವನದ ಮಹತ್ವದ ಘಟನೆಯೊಂದನ್ನು ಎದುರಿಸಿದ್ದಾರೆ: ಅದು ಅವರ ಚೊಚ್ಚಲ ವಿಮಾನಯಾನ. ಫೆಬ್ರವರಿ 14 ರಂದು, ಮೊನಾಲಿಸಾ, ಉದ್ಯಮಿ ಬಾಬಿ ಚೆಮ್ಮನೂರ್ ಅವರ ಆಹ್ವಾನದ ಮೇರೆಗೆ ಕೇರಳದ ಕೊಯಿಕ್ಕೋಡ್‌ಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು.
ಚೆಮ್ಮನೂರ್, ಈ ಹಿಂದೆ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಮೊನಾಲಿಸಾ ಅವರ ಪ್ರವಾಸದ ಬಗ್ಗೆ ಘೋಷಿಸಿದ್ದರು. ಅಂಗಡಿ ಉದ್ಘಾಟನೆಗಾಗಿ ಮೊನಾಲಿಸಾ ಅವರನ್ನು ಕೇರಳಕ್ಕೆ ಆಹ್ವಾನಿಸಿದ್ದರು. “ಕುಂಭ ಮೇಳದ ವೈರಲ್ ತಾರೆ ಮೊನಾಲಿಸಾ 10:30 ಕ್ಕೆ ಚೆಮ್ಮನೂರ್, ಕೊಯಿಕ್ಕೋಡ್‌ಗೆ ಆಗಮಿಸುತ್ತಿದ್ದಾರೆ” ಎಂದು ಬರೆದು ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದರು. ಫೆಬ್ರವರಿ 13 ರಂದು ಪೋಸ್ಟ್ ಮಾಡಲಾದ ಈ ವಿಡಿಯೋ ಈಗಾಗಲೇ 1 ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ.
ವಿಮಾನ ಪ್ರಯಾಣದ ಮೊದಲು ಮೊನಾಲಿಸಾ ತಮ್ಮ ಭಾವನೆಗಳನ್ನು ಹಂಚಿಕೊಂಡು ಮತ್ತು ನರ್ವಸ್ ಆಗಿರುವುದಾಗಿ ಹೇಳಿದ್ದರು. ಅಭಿಮಾನಿಗಳು ತೋರಿದ ಪ್ರೀತಿ ಮತ್ತು ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದರು.
ರುದ್ರಾಕ್ಷಿ ಮಣಿಗಳನ್ನು ಮಾರಾಟ ಮಾಡಲು ತಮ್ಮ ಕುಟುಂಬದೊಂದಿಗೆ ಮಹಾ ಕುಂಭ ಮೇಳಕ್ಕೆ ಪ್ರಯಾಣ ಬೆಳೆಸಿದ ಮೊನಾಲಿಸಾ ಭೋಸ್ಲೆ ಮಧ್ಯಪ್ರದೇಶದ ಮಹೇಶ್ವರದಲ್ಲಿ ವಾಸವಾಗಿದ್ದಾರೆ. ಕುಂಭಮೇಳದಲ್ಲಿ ಕಾಣಿಸಿಕೊಂಡ ನಂತರ ಅವರು ರಾತ್ರೋರಾತ್ರಿ ಅಂತರ್ಜಾಲದಲ್ಲಿ ಜನಪ್ರಿಯತೆ ಗಳಿಸಿದ್ದಾರೆ.