ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್ ಮೋಹನ್‌ಲಾಲ್ ತಮ್ಮ 63ನೇ ವರ್ಷದ ಹುಟ್ಟುಹಬ್ಬಕ್ಕೆ ಕಿಯಾ ಇವಿ6 ಕಾರನ್ನು ಉಡುಗೊರೆಯಾಗಿ ಪಡೆದಿದ್ದಾರೆ.
ಮೋಹನ್‌ಲಾಲ್ ಸ್ನೇಹಿತ, ಉದ್ಯಮಿ ಅಲೆಕ್ಸ್ ಕೆ ವರ್ಗೀಸ್ 72 ಲಕ್ಷ ರೂ ಮೌಲ್ಯದ ಈ ಉಡುಗೊರೆ ನೀಡಿದ್ದಾರೆ. ಅಲೆಕ್ಸ್ ವರ್ಗೀಸ್‌ರ ಹೆಡ್ಜ್ ಈಕ್ವಿಟೀಸ್‌ನ ಪ್ರಚಾರ ರಾಯಭಾರಿಯಾಗಿರುವ ಮೋಹನ್ ಲಾಲ್ ಈ ಉಡುಗೊರೆಯನ್ನು ತಮ್ಮ ಮಡದಿ ಸುಚಿತ್ರಾರೊಂದಿಗೆ ಸ್ವೀಕರಿಸಿದ್ದಾರೆ.
ಹಿಂದುಳಿದ ವರ್ಗಗಳಿಗೆ ಸೇರಿದ ಹೆಣ್ಣುಮಕ್ಕಳಿಗೆ ಆಶ್ರಯ ನೀಡುತ್ತಿರುವ ಏಂಜೆಲ್ಸ್ ಹಟ್ ಎಂಬ ಆಶ್ರಮದಲ್ಲಿ ತಮ್ಮ ಹುಟ್ಟುಹಬ್ಬದ ಸಂದರ್ಭ ಕಳೆದ ಮೋಹನ್‌ಲಾಲ್, ಈ ವೇಳೆಯ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
https://twitter.com/Lalcaresksa/status/1660207526237941761?ref_src=twsrc%5Etfw%7Ctwcamp%5Etweetembed%7Ctwterm%5E1660207526237941761%7Ctwgr%5Eaf748aae9bca0b92d24f253197a3ad9a27030057%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fbollywoodhungama-epaper-dhc5230a573d464ddda940ef242ecf700e%2Fmohanlalreceiveskiaev6worthrs72lakhsasabirthdaygift-newsid-n502131214