ಅಣ್ಣಾವ್ರ ಸಿನಿಮಾದ ಹಾಡು ಹೇಳಲು ಯತ್ನಿಸಿದ ಮಲಯಾಳಂ ನಟ ಮೋಹನ್ ಲಾಲ್; ವಿಡಿಯೋ ವೈರಲ್

ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಮೋಹನ್ ಲಾಲ್, ವರನಟ ಡಾ. ರಾಜ್ ಕುಮಾರ್ ಸಿನಿಮಾದ ಹಾಡುಗಳನ್ನು ಕೇಳುತ್ತಿರುವ ಹಾಗೂ ಹಾಡಲು ಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವರನಟ ಡಾ. ರಾಜ್ ಜೊತೆ ಮೋಹನ್ ಲಾಲ್ ಅವರಿಗೆ ಉತ್ತಮ ಬಾಂಧವ್ಯ ಇತ್ತು ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ವರನಟ ಡಾ. ರಾಜ್ ಅವರ ’ಎರಡು ಕನಸು” ಸಿನಿಮಾದ ’ಎಂದೆಂದೂ ನಿನ್ನನು ಮರೆತು” ಹಾಡು ಹಾಡಲು ಮೋಹನ್ ಲಾಲ್ ಯತ್ನಿಸಿದ್ದಾರೆ. ಒಂದು ಚಿತ್ರರಂಗದ ದಿಗ್ಗಜ ನಟ ಇನ್ನೊಂದು ಚಿತ್ರರಂಗದ ಮೇರುನಟನ ಚಿತ್ರಗಳನ್ನು ಆತ್ಮೀಯತೆಯಿಂದ ಎಂಜಾಯ್ ಮಾಡುತ್ತಾ ನೋಡುತ್ತಿರುವುದುಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಂದಹಾಗೇ ಮೋಹನ್ ಲಾಲ್ ಗೆ ಕನ್ನಡದಲ್ಲಿಯೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಅಲ್ಲದೇ ಮೇ 21 ಮೋಹನ್ ಲಾಲ್ ಅವರ ಜನ್ಮದಿನ. ಈ ಸಂದರ್ಭದಲ್ಲೇ ಅಣ್ಣಾವ್ರ ಸಿನಿಮಾದ ಹಾಡನ್ನು ಹಾಡಲು ಮೋಹನ್ ಲಾಲ್ ಪ್ರಯತ್ನಿಸುತ್ತಿರುವ ವಿಡಿಯೋ ಭಾರಿ ವೈರಲ್ ಆಗಿದೆ. ಅಣ್ಣಾವ್ರ ಅಭಿಮಾನಿಗಳಿಗೂ ಖುಷಿ ತಂದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read