BIG NEWS: 45 ವರ್ಷಗಳ ನಂತ್ರ ಪೋಲೆಂಡ್ ಗೆ ಭಾರತದ ಪ್ರಧಾನಿ ಭೇಟಿ; ದಾಖಲೆ ಬರೆಯಲಿದ್ದಾರೆ ʼಮೋದಿʼ

ಪ್ರಧಾನಿ ನರೇಂದ್ರ ಮೋದಿ, ಉಕ್ರೇನ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಮಾರ್ಗ ಮಧ್ಯೆ ಆಗಸ್ಟ್ 21 ರಂದು ಅವರು ಪೋಲೆಂಡ್‌ಗೆ ಭೇಟಿ ನೀಡುವ ಮೂಲಕ ಮತ್ತೊಂದು ದಾಖಲೆ ಬರೆಯಲಿದ್ದಾರೆ. ವಾಸ್ತವವಾಗಿ 45 ವರ್ಷಗಳಿಂದ ಪೋಲೆಂಡ್‌ ಗೆ ಭಾರತದ ಯಾವುದೇ ಪ್ರಧಾನಿ ಭೇಟಿ ನೀಡಿಲ್ಲ.

1979 ರಲ್ಲಿ ಮೊರಾರ್ಜಿ ದೇಸಾಯಿ ನಂತರ ಪೋಲೆಂಡ್‌ಗೆ ಭೇಟಿನೀಡುತ್ತಿರುವ  ಭಾರತದ ಪ್ರಧಾನಿಯಾಗಲಿದ್ದಾರೆ ನರೇಂದ್ರ ಮೋದಿ. ಇದಕ್ಕೂ ಮೊದಲು ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಇಬ್ಬರೂ ಪೋಲೆಂಡ್‌ ಗೆ ಭೇಟಿ ನೀಡಿದ್ದರು.

ಮೋದಿ, ವಾರ್ಸಾದಲ್ಲಿ ತಂಗಲಿದ್ದು, ಪೋಲಿಷ್ ಅಧ್ಯಕ್ಷ ಆಂಡ್ರೆಜ್ ದುಡಾ ಮತ್ತು ಪ್ರಧಾನಿ ಡೊನಾಲ್ಡ್ ಟಸ್ಕ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.  ದ್ವಿಪಕ್ಷೀಯ ಸಭೆಯ ಜೊತೆಗೆ  ಅವರು ಎರಡನೇ ಮಹಾಯುದ್ಧದ ಸಮಯದಲ್ಲಿ ಸಾವಿರಾರು ಪೋಲಿಷ್ ನಿರಾಶ್ರಿತರಿಗೆ ಆಶ್ರಯ ನೀಡಿದ್ದ, ಜಾಮ್‌ನಗರ ಮತ್ತು ಕೊಲ್ಲಾಪುರದ ಮಹಾರಾಜರ ಸ್ಮಾರಕಗಳಿಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅವರು ಮಾಂಟೆ ಕ್ಯಾಸಿನೊ ಕದನದ ಸ್ಮಾರಕಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ. ಮಾಂಟೆ ಕ್ಯಾಸಿನೊ ಕದನವು ವಿಶ್ವ ಸಮರ II ರ ಸಮಯದಲ್ಲಿ ಭಾರತೀಯ ಸೈನಿಕರು ನಡೆಸಿದ ಅತ್ಯಂತ ಕಠಿಣ ಯುದ್ಧಗಳಲ್ಲಿ ಒಂದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read