BIG NEWS : ರಾಜ್ಯದ ‘ದ್ವಿತೀಯ PUC ‘ಪರೀಕ್ಷೆ-2ರ ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರ ಪ್ರಕಟ, ವಿದ್ಯಾರ್ಥಿಗಳಿಗೆ ಇಲ್ಲಿದೆ ಮಾಹಿತಿ

ಬೆಂಗಳೂರು : ಏಪ್ರಿಲ್/ಮೇ 2025ರ ದ್ವಿತೀಯ ಪಿಯುಸಿ ಪರೀಕ್ಷೆ-2ರ ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರಗಳನ್ನು ಮಂಡಳಿಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ದಿನಾಂಕ:24.04.2025 ರಿಂದ 29.04.2025 ರವರೆಗೆ ನಡೆದ 2025ರ ದ್ವಿತೀಯ ಪಿಯುಸಿ ಪರೀಕ್ಷೆ-2ರ ವಿಷಯವಾರು ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರ (Scheme of Evaluation) ಗಳನ್ನು ಮಂಡಲಿಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ದಿನಾಂಕ: 02.05.2025 ರಿಂದ ದಿನಾಂಕ: 08.05.2025 ರವರೆಗೆ ನಡೆಯಲಿರುವ ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರಗಳನ್ನು ನಂತರ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು/ಪೋಷಕರುಗಳು ಈ ಕೆಳಗಿನ ಅಂಶಗಳಿಗೆ ಮಾತ್ರ ಆಕ್ಷೇಪಣೆಗಳನ್ನು ಪೂರಕ ದಾಖಲೆಗಳೊಂದಿಗೆ ಆನ್ಲೈನ್ನಲ್ಲಿ ಸಲ್ಲಿಸಬಹುದಾಗಿದೆ.

1) ದ್ವಂದ್ವಾರ್ಥ ಬರುವ ಪ್ರಶ್ನೆಗಳಿಗೆ
2) ಅಪೂರ್ಣ ಪ್ರಶ್ನೆಗಳಿಗೆ
3) ಪಠ್ಯಕ್ರಮದಲ್ಲಿ ಇಲ್ಲದೇ ಇರುವುದು.
4) ಕನ್ನಡ ಮತ್ತು ಇಂಗ್ಲೀಷ್ ಆವೃತ್ತಿಯಲ್ಲಿ ಬೇರೆ ಬೇರೆ ಅರ್ಥ ಬರುವಂತದ್ದು
5) ಒಂದು ಆಯ್ಕೆಗಿಂತ ಹೆಚ್ಚು ಆಯ್ಕೆಗಳು ಸರಿ ಇರುವ ಬಹು ಆಯ್ಕೆ ಪ್ರಶ್ನೆಗಳು
ಆನ್ಲೈನ್ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ:03.05.2025 ರಿಂದ 05.05.2025 ರ ಸಂಜೆ 5.00 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ದಿನಾಂಕ:05.05.2025 ರ ಸಂಜೆ 5.00 ಗಂಟೆಯ ನಂತರ ಸಲ್ಲಿಸಲಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಈ ಕೆಳಗಿನ ಲಿಂಕ್ ಬಳಸಿ ಆಕ್ಷೇಪಣೆಗಳನ್ನು ಸಲ್ಲಿಸುವುದು.
-:ಮಂಡಲಿಯ ವೆಬ್ಸೈಟ್ ವಿಳಾಸ:-
https://dpue-exam.karnataka.gov.in/sovdpue2025exam2 Latest News Click here for filing objections for II PUC Examination April/May 2025 Scheme of Evaluation.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read