ವಿದ್ಯಾರ್ಥಿಗಳಿಗೆ ಪೀಕಲಾಟ ತಂದಿಟ್ಟ ‘ಎಮರ್ಜೆನ್ಸಿ ಅಲರ್ಟ್’ ಮೆಸೇಜ್

Emergency Alert: ಗಾಬರಿಯಾಗಬೇಡಿ..! ಇಂದು (ಅ 12) ನಿಮ್ಮ ಮೊಬೈಲ್‌ಗೆ ದೊಡ್ಡ ಬೀಪ್‌ ಸೌಂಡ್ ಜತೆಗೆ ಬರಲಿದೆ ಎಮರ್ಜೆನ್ಸಿ ಅಲರ್ಟ್‌ ಮೆಸೇಜ್‌; ಏನಿದರ ಗುಟ್ಟು -ಇಲ್ಲಿದೆ ಮಾಹಿತಿ - New

ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರನ್ನು ಎಚ್ಚರಿಸಲು ಭಾರತ ಸರ್ಕಾರದ ದೂರ ಸಂಪರ್ಕ ಇಲಾಖೆ ನೂತನ ವ್ಯವಸ್ಥೆಯೊಂದನ್ನು ಅಳವಡಿಸಿದ್ದು, ಏಕಕಾಲಕ್ಕೆ ಎಲ್ಲರ ಮೊಬೈಲ್ ಗಳಲ್ಲಿ ಸೈರನ್ ಸಹಿತ ಅಲರ್ಟ್ ಮೆಸೇಜ್ ಬರುತ್ತದೆ. ಗುರುವಾರದಂದು ಇದರ ಪರೀಕ್ಷಾರ್ಥ ಪ್ರಯೋಗ ಮಾಡಲಾಗಿದ್ದು, ಇದರ ಅರಿವಿರದಿದ್ದವರು ಏನಾಯ್ತೋ ಎಂದು ಕ್ಷಣ ಕಾಲ ಬೆಚ್ಚಿಬಿದ್ದಿದ್ದಾರೆ.

ಈ ಮೊದಲಿನಿಂದಲೂ ದೂರಸಂಪರ್ಕ ಇಲಾಖೆ ಮೆಸೇಜ್ ಗಳ ಮೂಲಕ ಈ ಕುರಿತು ಸಂದೇಶ ಕಳುಹಿಸಿದ್ದರೂ ಸಹ ಬಹುತೇಕರಿಗೆ ಇದು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬುದರ ಅರಿವಿರಲಿಲ್ಲ. ಹೀಗಾಗಿ ಗುರುವಾರ ನಡೆದ ಟ್ರಯಲ್ ವೇಳೆ ಮೊಬೈಲ್ ಸೈರನ್ ಹಾಗೂ ಕಂಪನ ಕಂಡು ಕೆಲವರು ಕಂಗಾಲಾಗಿದ್ದು, ಬಳಿಕ ಬಂದ ಮೆಸೇಜ್ ನೋಡಿ ಸಮಾಧಾನದ ನಿಟ್ಟಿಸಿರುಬಿಟ್ಟಿದ್ದಾರೆ.

ಇನ್ನು ಗುರುವಾರದ ಈ ‘ಎಮರ್ಜೆನ್ಸಿ ಅಲರ್ಟ್’ ಮೆಸೇಜ್ ಪರೀಕ್ಷೆ ಹಲವು ವಿದ್ಯಾರ್ಥಿಗಳಿಗೆ ಪೀಕಲಾಟ ತಂದಿಟ್ಟ ಘಟನೆಯೂ ನಡೆದಿದೆ. ಶಾಲಾ – ಕಾಲೇಜಿನ ತರಗತಿಗಳಿಗೆ ಮೊಬೈಲ್ ತರಬಾರದೆಂಬ ನಿಯಮವಿದ್ದರೂ ಕೆಲ ವಿದ್ಯಾರ್ಥಿಗಳು ಗುಟ್ಟಾಗಿ ತರುತ್ತಿದ್ದರು.

ಹೀಗೆ ಸೈಲೆಂಟ್ ಮಾಡ್ ನಲ್ಲಿ ಮೊಬೈಲ್ ಇಟ್ಟುಕೊಂಡ ವಿದ್ಯಾರ್ಥಿಗಳ ಹ್ಯಾಂಡ್ ಸೆಟ್ ಗೆ ಅಲರ್ಟ್ ಮೆಸೇಜ್ ಸೈರನ್ ಬಂದಾಗ ತರಗತಿಯಲ್ಲಿದ್ದ ಉಪನ್ಯಾಸಕರು ಅವುಗಳನ್ನು ಕಿತ್ತುಕೊಂಡು ಪ್ರಾಂಶುಪಾಲರಿಗೆ ನೀಡಿರುವ ಘಟನೆಯೂ ಅಲ್ಲಲ್ಲಿ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read