Video: ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ; ವ್ಯಾನ್ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿತ

ಶಾಲಾ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಶಾಲಾ ವ್ಯಾನ್ ಚಾಲಕನಿಗೆ ಥಳಿಸಿದ ಘಟನೆ ಪುಣೆಯಲ್ಲಿ ನಡೆದಿದೆ. ಇಲ್ಲಿನ ಎಂಎನ್ಎಸ್ ಕಾರ್ಯಕರ್ತರು, ಶಾಲಾ ವ್ಯಾನ್‌ ಚಾಲಕನಿಗೆ ಥಳಿಸಿದ್ದಾರೆ. ಬಾಲಕಿಯ ದೂರಿನ ಬಳಿಕ ಪೊಲೀಸರು ಶಾಲಾ ವ್ಯಾನ್ ಚಾಲಕನ ವಿರುದ್ಧ ತನಿಖೆ ಆರಂಭಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ತನಿಖೆ ಆರಂಭಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಚಾಲಕನಿಗೆ ಥಳಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ. ಎಕ್‌ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಫೋನ್‌ ನಲ್ಲಿ ಬಾಲಕಿ ಜೊತೆ ಕೆಟ್ಟದಾಗಿ ಮಾತನಾಡಿದ್ದ ಎನ್ನಲಾಗಿದೆ. ಚಾಲಕನಿಗೆ ಎಂಎನ್‌ಎಸ್‌ ಕಾರ್ಯಕರ್ತರು ಹೊಡೆದಿದ್ದು, ವಿಡಿಯೋ ಕೊನೆಯಲ್ಲಿ ಸಂಧಾನ ಮಾತುಕತೆ ನಡೆಯುತ್ತಿರೋದನ್ನು ನೋಡ್ಬಹುದು.

ಸದ್ಯ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಸ್ವೀಪರ್‌ನಿಂದ 4 ವರ್ಷದ ಇಬ್ಬರು ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಸುದ್ದಿಯಲ್ಲಿರುವಾಗ್ಲೇ ಈ ಘಟನೆ ಬೆಳಕಿಗೆ ಬಂದಿದೆ.

https://twitter.com/imvivekgupta/status/1826835185997857050?ref_src=twsrc%5Etfw%7Ctwcamp%5Etweetembed%7Ctwterm%5E1826835185997857050%7Ctwgr%5E034999ded0c9086924b260aa302a69f5236ba24c%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flokmattimes-epaper-dhfd5012174f5c4159918eaf51ebc42a19%2Fpunemnsworkersbeatschoolvandriverforallegedlymisbehavingwithgirlstudentwatchvideo-newsid-n627764837

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read