ಬ್ಯಾಂಕ್ ಖಾತೆ ಮಾಹಿತಿ ಪಡೆದು ಎಂಎಲ್ಸಿ ಹೆಚ್. ವಿಶ್ವನಾಥ್ ಪುತ್ರನಿಗೆ ವಂಚನೆ

ಮೈಸೂರು: ಎಟಿಎಂಗೆ ಹೋಗಿದ್ದ ವೇಳೆ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರ ಪುತ್ರನಿಗೆ ಆನ್ಲೈನ್ ಮೂಲಕ ವಂಚಿಸಲಾಗಿದೆ.

ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ವಂಚನೆಗೊಳಗಾದವರು. ಹಣ ಡ್ರಾ ಮಾಡಲು ಅಮಿತ್ ದೇವರಹಟ್ಟಿ ಎಟಿಎಂಗೆ ಹೋಗಿದ್ದು, ಹಣ ಬಾರದ ಕಾರಣ ಕಸ್ಟಮರ್ ಕೇರ್ ನಂಬರ್ ಗೆ ಕರೆ ಮಾಡಿದ್ದಾರೆ. ಗೂಗಲ್ ನಲ್ಲಿ ನಂಬರ್ ಹುಡುಕಿ ಅಮಿತ್ ಕರೆ ಮಾಡಿದ್ದು, ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ ವಂಚಿಸಿದ್ದಾನೆ. ಅಮಿತ್ ಅವರ ಬ್ಯಾಂಕ್ ಖಾತೆಯ ವಿವರ ಪಡೆದು ವಂಚಿಸಿದ್ದಾನೆ. ಈ ಬಗ್ಗೆ ಅಮಿತ್ ದೇವರಹಟ್ಟಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read