ತಂಡದ ಆಯ್ಕೆಗೆ ಬಂದಿದ್ದ ಯುವ ಮಹಿಳಾ ಕ್ರಿಕೆಟರ್ ಶವವಾಗಿ ಪತ್ತೆ

ಒಡಿಶಾದ ರಾಜಶ್ರೀ ಸ್ವೈನ್ ಎಂಬ 26 ವರ್ಷದ ಮಹಿಳಾ ಕ್ರಿಕೆಟರ್ ಕಟಕ್ ಜಿಲ್ಲೆಯ ದಟ್ಟ ಅರಣ್ಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜನವರಿ 11 ರಿಂದ ನಾಪತ್ತೆಯಾಗಿದ್ದ ರಾಜಶ್ರೀ ಅವರು ಅಥಗಢದ ಗುರುಡಿಜಾಟಿಯಾ ಅರಣ್ಯದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಕಟಕ್‌ನ ಉಪ ಪೊಲೀಸ್ ಆಯುಕ್ತ ಪಿನಾಕ್ ಮಿಶ್ರಾ ತಿಳಿಸಿದ್ದಾರೆ. ಆಕೆಯ ಸ್ಕೂಟರ್ ಕಾಡಿನ ಬಳಿ ಬಿಟ್ಟು ಹೋಗಿರುವುದು ಕಂಡುಬಂದಿದೆ.

ಜನವರಿ 11 ರಿಂದ ಕಾಣೆಯಾಗಿದ್ದ ಒಡಿಶಾದ ಮಹಿಳಾ ಕ್ರಿಕೆಟರ್ ರಾಜಶ್ರೀ ಸ್ವೈನ್ ಅವರ ಮೃತದೇಹ ಕಟಕ್ ನಗರದ ಸಮೀಪ ದಟ್ಟ ಅರಣ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಕಟಕ್ ನ ಡಿಸಿಪಿ ಪಿನಾಕ್ ಮಿಶ್ರಾ ಹೇಳಿದ್ದಾರೆ.‌

ಪುದುಚೇರಿಯಲ್ಲಿ ಮುಂಬರುವ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಾಗಿ ಒಡಿಶಾ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಪುರಿ ಜಿಲ್ಲೆಯ ರಾಜಶ್ರೀ ಇಲ್ಲಿಗೆ ಬಂದಿದ್ದರು ಎಂದು ವರದಿಯಾಗಿದೆ. ಆದಾಗ್ಯೂ, ಅವರು ಪಂದ್ಯಾವಳಿಗೆ ಆಯ್ಕೆಯಾದ 16 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದರು.

ಆಯ್ಕೆಯಾದ ತಂಡದ ಸದಸ್ಯರ ಹೆಸರುಗಳನ್ನು ಪ್ರಕಟಿಸಿದ ನಂತರ ಅವರು ಬುಧವಾರ ಸಂಜೆ ಅಳುತ್ತಿರುವುದನ್ನು ನೋಡಿದೆ. ಸ್ವಲ್ಪ ಸಮಯದ ನಂತರ ಅವರು ತರಬೇತಿ ಅವಧಿಯಲ್ಲಿದ್ದ ಹೋಟೆಲ್‌ನಿಂದ ನಾಪತ್ತೆಯಾಗಿದ್ದರು ಎಂದು ಆಕೆಯ ರೂಮ್‌ಮೇಟ್ ತಿಳಿಸಿದ್ದಾರೆ.

ಬಲಗೈ ವೇಗದ ಬೌಲರ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ರಾಜಶ್ರೀ ಅವರ ದೇಹದಲ್ಲಿ ಗಾಯದ ಗುರುತುಗಳು ಮತ್ತು ಕಣ್ಣುಗಳು ಹಾನಿಗೊಳಗಾಗಿದ್ದರಿಂದ ಕೊಲೆ ಮಾಡಲಾಗಿದೆ ಎಂದು ಆಕೆಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಆಯ್ಕೆಯಾದ ಅನೇಕರಿಗಿಂತ ಉತ್ತಮ ಪ್ರದರ್ಶನ ನೀಡಿದರೂ ರಾಜಶ್ರೀಗೆ ತಂಡದಲ್ಲಿ ಸ್ಥಾನ ನೀಡಲು ನಿರಾಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಅಸೋಸಿಯೇಷನ್‌ನ ಸಿಇಒ ಸುಬ್ರತ್ ಬೆಹೆರಾ, ಆಕೆಯ ನಿಧನಕ್ಕೆ ಆಘಾತ ವ್ಯಕ್ತಪಡಿಸಿ, ಅತ್ಯಂತ ಪಾರದರ್ಶಕವಾಗಿ ಆಯ್ಕೆ ಮಾಡಲಾಗಿದೆ. ಪೂರ್ವಾಗ್ರಹವಿದ್ದರೆ, ಶಿಬಿರದಲ್ಲಿ ಭಾಗವಹಿಸಿದ 25 ಸದಸ್ಯರ ಸಂಭಾವ್ಯ ತಂಡದಲ್ಲಿ ಅವಳು ಹೇಗೆ ಸ್ಥಾನ ಪಡೆದಳು ಎಂದು ಬೆಹೆರಾ ಪ್ರಶ್ನಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read