ಚಿನ್ನಾಭರಣ ಕದ್ದು ಪ್ರೇಮಿಗಳ ಜೊತೆ‌ ಗೋವಾ ಪ್ರವಾಸ; ವಿದ್ಯಾರ್ಥಿನಿಯರ ಕೃತ್ಯಕ್ಕೆ ಪೋಷಕರು ಶಾಕ್

ಇತ್ತೀಚೆಗೆ‌ ಗುಜರಾತಿನ ಅಹ್ಮದಾಬಾದ್ ನಗರದ ಪೋಲಿಸರು ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರನ್ನು ಗೋವಾದಲ್ಲಿ ಪತ್ತೆ ಹಚ್ಚಿದ್ದಾರೆ. ಸಿಬಿಎಸ್ಇ ಶಾಲೆಯ 10ನೇ ತರಗತಿಯಲ್ಲಿ ಓದುತ್ತಿದ್ದ ಈ ಬಾಲಕಿಯರು ತಮ್ಮ ಪ್ರೇಮಿಗಳೊಂದಿಗೆ ಓಡಿಹೋಗಿ ಗೋವಾದಲ್ಲಿ ಕಾಲ ಕಳೆದಿದ್ದಾರೆ. ಈ ಬಾಲಕಿಯರಲ್ಲಿ ಒಬ್ಬಳು ವಯಸ್ಕ ಪ್ರೇಮಿಯೊಂದಿಗೂ, ಮತ್ತೊಬ್ಬಳು ಅಪ್ರಾಪ್ತ ಪ್ರೇಮಿಯೊಂದಿಗೂ ಸಂಬಂಧ ಹೊಂದಿದ್ದಳು.

ತನಿಖೆ ನಡೆಸಿದ ಪೋಲಿಸರಿಗೆ ಈ ನಾಲ್ವರು ಆಗಾಗ ಭೇಟಿಯಾಗುತ್ತಿದ್ದರು ಮತ್ತು ಶಾಲಾ ತರಗತಿಗಳನ್ನು ಹಾಗೂ ಟ್ಯೂಷನ್ ತರಗತಿಗಳನ್ನು ತಪ್ಪಿಸಿ ಸುತ್ತಾಡುತ್ತಿದ್ದರು ಎಂಬುದು ತಿಳಿದುಬಂದಿದೆ. ಗೋವಾ ಪ್ರವಾಸಕ್ಕೆ ತೆರಳುವ ಮುನ್ನ ಬಾಲಕಿಯರಲ್ಲಿ ಒಬ್ಬಳು ತನ್ನ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕದ್ದಿದ್ದಳು. ಈ ನಾಲ್ವರು ಮುಂಬೈ ಮೂಲಕ ಗೋವಾಕ್ಕೆ ತೆರಳಿದ್ದರು. ಬಾಲಕಿಯರು ನಾಪತ್ತೆಯಾಗಿರುವುದನ್ನು ತಿಳಿದ ಅವರ ಪೋಷಕರು ಸರ್ಖೇಜ್ ಪೋಲಿಸ್ ಠಾಣೆಗೆ ದೂರು ನೀಡಿದ್ದರು.

ತಾಂತ್ರಿಕ ಪರಿಣಿತಿಯ ಸಹಾಯದಿಂದ ಪೋಲಿಸರು ತನಿಖೆ ನಡೆಸಿದಾಗ ಬಾಲಕಿಯರಲ್ಲಿ ಒಬ್ಬಳು ತನ್ನ ಮೊಬೈಲ್ ಫೋನ್ ಸ್ವಿಚ್ ಆನ್ ಮಾಡಿದ ತಕ್ಷಣ ಆಕೆಯ ಸ್ಥಳ ಗೋವಾ ಎಂದು ತಿಳಿದುಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೋಲಿಸರು ಗೋವಾಕ್ಕೆ ತೆರಳಿ ಬಾಲಕಿಯರನ್ನು ವಶಕ್ಕೆ ಪಡೆದರು. ಬಾಲಕಿಯರು ತಾವೆಲ್ಲರೂ ಕೇವಲ ಆನಂದಕ್ಕಾಗಿ ಹೊರಗೆ ಬಂದಿದ್ದು, ಶೀಘ್ರದಲ್ಲಿಯೇ ಹಿಂದಿರುಗಲು ಸಿದ್ಧರಿದ್ದೆವು ಎಂದು ಹೇಳಿಕೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read