ಕೊಲೆಯಾಗಿದ್ದಾನೆಂದು ಭಾವಿಸಿದ್ದ ವ್ಯಕ್ತಿ ಆರೋಪಿ ಎನಿಸಿಕೊಂಡವನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕ….!

ಬಿಹಾರದಿಂದ ತಪ್ಪಿಸಿಕೊಂಡಿದ್ದ ವ್ಯಕ್ತಿಯೊಬ್ಬರು ಆತನನ್ನು ಕೊಲೆ ಮಾಡಿದ್ದಾನೆ ಎಂದು ಆಪಾದಿಸಲಾದ ವ್ಯಕ್ತಿಯ ಕೈಗೆ ಸಿಕ್ಕಿರುವ ಘಟನೆ ನೋಯಿಡಾದಲ್ಲಿ ಜರುಗಿದೆ.

ಭಾಗಲ್ಪುರ ಜಿಲ್ಲೆಯ ನಿವಾಸಿ ರವಿ ಶಂಕರ್‌ ಸಿಂಗ್ ನೋಯಿಡಾದ ಸೆಕ್ಟರ್‌ 50ಯಲ್ಲಿರುವ ಮೋಮೋ ಸ್ಟಾಲ್ ಒಂದರಲ್ಲಿ ಮೋಮೋ ತಿನ್ನಲೆಂದು ಬಂದಿದ್ದಾರೆ.

ಈ ವೇಳೆ ಮೋಮೋ ಸ್ಟಾಲ್‌ನಾತ ಭಿಕ್ಷುಕನೊಬ್ಬನನ್ನು ಓಡಿಸುತ್ತಿರುವುದು ಸಿಂಗ್ ಕಣ್ಣಿಗೆ ಬಿದ್ದಿದೆ, ಈ ಭಿಕ್ಷುಕನ ಕಂಡು ಮರುಗಿದ ಸಿಂಗ್, ಆತನಿಗೆ ಮೋಮೋ ಖರೀದಿಸಿ ಕೊಡಲೆಂದು ಆತನ ಬಳಿ ಹೋಗಿದ್ದಾರೆ.

ಈ ವೇಳೆ ಭಿಕ್ಷುಕನ ಮುಖ ತನ್ನ ಪರಿಚಯದ ಮುಖವಿದ್ದ ಹಾಗೇ ಇದೆ ಎಂದು ಅನಿಸಿತ್ತಲೇ ಆತನ ಇಹಪರಗಳನ್ನು ವಿಚಾರಿಸಲು ಸಿಂಗ್ ಮುಂದಾಗಿದ್ದಾರೆ. ತಾನು ನಿಶಾಂತ್ ಕುಮಾರ್‌ ಎಂಬುವವನಾಗಿದ್ದು, ಬಿಹಾರದ ಧೃವ್‌ಗಂಜ್‌ನ ಸಚ್ಚಿದಾನಂದ ಸಿಂಗ್‌ರ ಪುತ್ರ ಎಂದು ಆತ ಪರಿಚಯಿಸಿಕೊಂಡಿದ್ದಾರೆ.

ಕೂಡಲೇ ಭಿಕ್ಷುಕನ ಚಿತ್ರ ಸೆರೆ ಹಿಡಿದ ಸಿಂಗ್ ಆತನ ಚಿತ್ರಗಳನ್ನು ಸಂಬಂಧಿಗಳಿಗೆ ಕಳುಹಿಸಿದ್ದಾರೆ. ಬಿಹಾರದ ಸುಲ್ತಾನ್‌ಗಂಜ್‌ನ ಗಂಗಾನಿಯಾದಲ್ಲಿರುವ ಆತನ ಸಹೋದರ ಸಂಬಂಧಿ ಮನೆಯಿಂದ ಜನವರಿ 2023ರಿಂದ ತಪ್ಪಿಸಿಕೊಂಡಿದ್ದ ನಿಶಾಂತ್‌ ಕುಮಾರರನ್ನು ಮೃತಪಟ್ಟಿದ್ದಾರೆ ಎಂದು ಆತನ ಸಂಬಂಧಿಕರೆಲ್ಲಾ ಭಾವಿಸಿದ್ದರು.

ನಿಶಾಂತ್‌ರನ್ನು ಅಪಹರಿಸಿ ಕೊಂದಿದ್ದಾರೆ ಎಂದು ಸಿಂಗ್ ಹಾಗೂ ಅವರ ತಂದೆಯ ಮೇಲೆ ಆಪಾದನೆ ಸಹ ಇತ್ತು.

ನೋಯಿಡಾದಲ್ಲಿ ನಿಶಾಂತ್‌ರನ್ನು ಕಾಣುತ್ತಲೇ ಪೊಲೀಸರನ್ನು ಸಂಪರ್ಕಿಸಿದ ಸಿಂಗ್, ಆತನನ್ನು ಅವರಿಗೆ ಒಪ್ಪಿಸಿದ್ದು, ಇಷ್ಟು ದಿನವಾದ ಮೇಲಾದರೂ ತಮ್ಮ ಮೇಲಿನ ಆಪಾದನೆಗಳು ದೂರವಾಗಲಿ ಎಂದು ಆಶಿಸುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read