ಬೆಂಗಳೂರು: ಸಾಕುಪ್ರಾಣಿಯೊಂದಿಗೆ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಾಯಿಯನ್ನು ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಸಿದುಕೊಂಡು ಹೋದ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ.
ಸಿಸಿಟಿವಿ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸರಗಳ್ಳರ ನಡುವೆ ಬೆಂಗಳೂರಲ್ಲಿ ನಾಯಿ ಕಳ್ಳರ ಹಾವಳಿ ಕೂಡ ಶುರು ಆಗಿದೆ.
ವರದಿಗಳ ಪ್ರಕಾರ, ಫೆಬ್ರವರಿ 12 ರಂದು ಮಧುರಾ ಎಂಬ ನಿವಾಸಿ ತನ್ನ ನಾಯಿ ‘ರಿಚಿ’ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಇದ್ದಕ್ಕಿದ್ದಂತೆ, ಹೆಲ್ಮೆಟ್ ಧರಿಸಿದ ಇಬ್ಬರು ಬೈಕ್ ಸವಾರರು ಬಂದು ಹಗ್ಗವನ್ನು ಕಸಿದುಕೊಂಡು ವೇಗವಾಗಿ ಹೋದರು. ವೀಡಿಯೊದಲ್ಲಿ, ಮಹಿಳೆ ಅವರನ್ನು ಹಿಡಿಯಲು ಹಿಂದೆ ಓಡುತ್ತಿರುವುದು ಕಂಡುಬಂದಿದೆ, ಆದರೆ ಅವಳಿಗೆ ಸಾಧ್ಯವಾಗಲಿಲ್ಲ.