ಚಲಿಸುತ್ತಿದ್ದ ಕಾರಿನಡಿ ಸಿಲುಕಿದ ಮಗುವೊಂದು ಪವಾಡಸದೃಶ ರೀತಿಯಲ್ಲಿ ಪಾರಾದ ಘಟನೆಯ ವಿಡಿಯೋ ವೈರಲ್ ಆಗಿದೆ.
ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಜರುಗಿದ ಈ ಘಟನೆಯಲ್ಲಿ, ಬೀದಿಯಲ್ಲಿ ಆಟವಾಡುತ್ತಿದ್ದ ಮಗುವೊಂದು ಎದುರು ದಿಕ್ಕಿನಿಂದ ಬರುತ್ತಿದ್ದ ಕಾರಿಗೆ ಸಿಕ್ಕಿಕೊಂಡು ಅದರಡಿ ಬಿದ್ದಿದೆ.
ಕಾರಿನ ಚಕ್ರಗಳು ಮಗುವಿನ ಮೇಲೆ ಹರಿದರೂ ಸಹ ಪವಾಡಸದೃಶವಾಗಿ ಆಕೆ ಮೇಲೆದ್ದು, ಅಲ್ಲಿಂದ ಗಾಬರಿಯಾಗಿ ಓಡಿ ಹೋಗಿದ್ದಾಳೆ. ಘಟನೆ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
https://twitter.com/imrajni_singh/status/1662717742766784513?ref_src=twsrc%5Etfw%7Ctwcamp%5Etweetembed%7Ctwterm%5E1662717742766784513%7Ctwgr%5E3b4fe930179872c8c13b44358ed937776c5b4667%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fmiraculousescapechildsurvivesafterbeingrunoverbycarinupsgorakhpurwatch-newsid-n504140666