BREAKING: ಹಾಸನಾಂಬ ದೇವಾಲಯದಲ್ಲಿ ಪವಾಡ: ಸುರಿಯುವ ಮಳೆಯಲ್ಲೂ ಆರದೆ ಪ್ರಜ್ವಲಿಸಿದ ದೀಪ

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ದೇವಾಲಯದಲ್ಲಿ ಪವಾಡವೇ ನಡೆದಿದೆ. ಸುರಿಯುವ ಮಳೆಯಲ್ಲಿಯೂ ದೀಪ ಪ್ರಜ್ವಲಿಸಿದೆ.

ಮಳೆ ಸುರಿಯುತ್ತಿದ್ದರೂ ದೇವಾಲಯದಲ್ಲಿ ದೀಪ ಉರಿಯುತ್ತಿದೆ. ಹಾಸನಾಂಬೆ ದೇವಾಲಯದ ಮುಂದೆ ಹಚ್ಚಿಟ್ಟಿರುವ ದೀಪ ಜೋರಾಗಿ ಮಳೆ ಬರುತ್ತಿದ್ದರೂ ಆರದೆ ಪ್ರಜ್ವಲಿಸುತ್ತಿದೆ.

ಅ. 24ರಂದು ಹಾಸನಾಂಬ ದೇವಾಲಯ ಬಾಗಿಲು ತೆರೆಯಲಾಗಿದ್ದು, ಅ. 25ರಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಬಾರಿ 11 ದಿನಗಳ ಕಾಲ ದೇವಾಲಯದ ಬಾಗಿಲು ತೆರೆದರೂ ಮೊದಲ ದಿನ ಮತ್ತು ಅಂತಿಮ ದಿನವಾದ ನವೆಂಬರ್ 3ರಂದು ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. 9 ದಿನದೊಳಗೆ ದರ್ಶನ ಮಾಡಬೇಕಿದೆ.

ರೈಲು, ಬಸ್, ಬಾಡಿಗೆ, ಸ್ವಂತ ವಾಹನದಲ್ಲಿ ರಾಜ್ಯ, ಹೊರ ರಾಜ್ಯವಲ್ಲದೇ, ವಿದೇಶದಿಂದಲೂ ಭಕ್ತರು ಆಗಮಿಸಿ, ಹಾಸನಾಂಬೆ ದರ್ಶನ ಪಡೆಯತೊಡಗಿದ್ದಾರೆ. ವಾರಾಂತ್ಯ ದಿನವಾದ ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯ ಭಕ್ತರು ದರ್ಶನ ಪಡೆದುಕೊಂಡಿದ್ದಾರೆ.

ಕಳೆದ ಮೂರು ದಿನದ ಅವಧಿಯಲ್ಲಿ 5 ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬೆ ದರ್ಶನ ಪಡೆದುಕೊಂಡಿದ್ದು, ಟಿಕೆಟ್ ರೂಪದಲ್ಲಿ ಮೂರು ಕೋಟಿ ರೂಪಾಯಿ ಆದಾಯ ಬಂದಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಹಾಸನಾಂಬೆ ದರ್ಶನ ಪಡೆದುಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read