ಹೈದರಾಬಾದ್ ನಲ್ಲಿ ಗೆಳತಿಯ ಭೀಕರ ಮರ್ಡರ್ ಕೇಸ್; ದೇಹ ಕೊಳೆಯಲು ಮತ್ತು ವಾಸನೆ ಬರಲು ಎಷ್ಟು ಗಂಟೆ ಬೇಕಾಗುತ್ತದೆಂದು ಹುಡುಕಾಡಿದ್ದ ಆರೋಪಿ

ಹೈದರಾಬಾದ್ ನಲ್ಲಿ ನಡೆದ ಭೀಕರ ಮರ್ಡರ್ ಪ್ರಕರಣದಲ್ಲಿ ಆರೋಪಿ ಮನೋಜ್ ಸಾನೆ, ಸರಸ್ವತಿಯ ದೇಹವನ್ನ ಕತ್ತರಿಸಿದ ನಂತರ ಅದು ಕೊಳೆಯಲು ಮತ್ತು ವಾಸನೆ ಬರಲು ಎಷ್ಟು ಗಂಟೆಗಳು ತೆಗೆದುಕೊಳ್ಳುತ್ತದೆ? ಎಂಬುದನ್ನ ಗೂಗಲ್ ನಲ್ಲಿ ಸರ್ಚ್ ಮಾಡಿದ್ದ ಎಂದು ತಿಳಿದುಬಂದಿದೆ.

ಜೂನ್ 4 ರಂದು ತನ್ನ 32 ವರ್ಷದ ಗೆಳತಿಯನ್ನು ಕೊಂದು ಅವಳ ದೇಹವನ್ನು ಅನೇಕ ತುಂಡುಗಳಾಗಿ ಕತ್ತರಿಸಿದ ಆರೋಪಿ 56 ವರ್ಷದ ಲಿವ್ ಇನ್ ಪಾಲುದಾರ ಮನೋಜ್ ಇಂಟರ್ನೆಟ್ ಸರ್ಚ್ ಇಂಜಿನ್‌ನಲ್ಲಿ ಈ ರೀತಿ ಟೈಪ್ ಮಾಡಿ ಹುಡುಕಾಡಿದ್ದ.

ಏತನ್ಮಧ್ಯೆ ಮರಣೋತ್ತರ ಪರೀಕ್ಷೆಯನ್ನು ನಡೆಸುತ್ತಿರುವ ಜೆಜೆ ಆಸ್ಪತ್ರೆ ಮೃತಳ ದೇಹದ ಶೇಕಡಾ 10 ರಷ್ಟು ಭಾಗಗಳು ಇನ್ನೂ ನಾಪತ್ತೆಯಾಗಿವೆ ಎಂದು ಪೊಲೀಸರಿಗೆ ತಿಳಿಸಿದೆ. ಸಾವಿಗೆ ನಿಖರವಾದ ಕಾರಣವನ್ನು ಪರಿಶೀಲಿಸಲು ಪೊಲೀಸರು ಸೀರಮ್ ಕ್ಯಾಲ್ಸಿಯಂ (ಸಿಎ) ಮತ್ತು ಮೆಗ್ನೀಸಿಯಮ್ (ಎಂಜಿ) ವರದಿಯ ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿದ್ದಾರೆ. ಈ ವರದಿಯು ಮೃತ ಮಹಿಳೆಗೆ ವಿಷ ನೀಡಿ ಕೊಲ್ಲಲಾಗಿದೆಯೇ ಎಂದು ತೀರ್ಮಾನಿಸಲು ಸಹಾಯ ಮಾಡುತ್ತದೆ.

ಸರಸ್ವತಿಯನ್ನು ತಾನು ಕೊಂದಿಲ್ಲ ಎಂದು ಆರೋಪಿ ಸಮರ್ಥಿಸಿಕೊಂಡಿದ್ದಾನೆ. ಪೊಲೀಸರ ಪ್ರಕಾರ ಆರೋಪಿ ಜೂನ್ 5ರೊಳಗೆ ದೇಹದ ಭಾಗಗಳನ್ನು ಕತ್ತರಿಸುವುದನ್ನು ಪೂರ್ಣಗೊಳಿಸಿ ಅವುಗಳನ್ನು ಮೂರು ಬಕೆಟ್‌ಗಳಾಗಿ ವಿಂಗಡಿಸಿ ಅವುಗಳನ್ನು ರೈಲ್ವೆ ಹಳಿಗಳ ಬಳಿ ಎಸೆಯಲು ಮತ್ತು ದೇಹದ ಭಾಗಗಳನ್ನು ಕುದಿಸಿ ನಾಶಮಾಡಲು ನಿರ್ಧರಿಸಿದ್ದ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read