ಬೃಹನ್ಮುಂಬಯಿಯ ಮೀರಾ ಭಯಂದರ್ ಪ್ರದೇಶದ ವಾಲ್ಚಂದ್ ನಗರ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್ ಒಂದರ ಎಲಿವೇಟರ್ ನಲ್ಲಿ ಮದುಮಗಳೊಬ್ಬರು ಸಿಲುಕಿಕೊಂಡಿದ್ದು, ಆಕೆಯನ್ನು 20 ನಿಮಿಷಗಳ ಬಳಿಕ ರಕ್ಷಿಸಲಾಗಿದೆ.
ಭಯಂದರ್ ಪ್ರದೇಶದ ವಿನಾಯಕ ನಗರದಲ್ಲಿ ಬೆಳಿಗ್ಗೆ 8 ಗಂಟೆಯ ವೇಳೆಗೆ ಈ ಘಟನೆ ವರದಿಯಾಗಿದೆ. ಮದುಮಗಳು ಪ್ರೀತಿ ವಾಗ್ಲೇ ಹಾಗೂ ಆಕೆಯ ಸಹೋದರಿಯರು ಹಾಗೂ ಬಂಧುಗಳು ಮದುವೆಯ ಸ್ಥಳಕ್ಕೆ ಧಾವಿಸುತ್ತಿದ್ದರು.
ಇವರು ಏರಿದ್ದ ಎಲಿವೇಟರ್ ನೆಲ ಹಾಗೂ ಮೊದಲನೇ ಮಹಡಿಗಳ ನಡುವೆ ಸಿಕ್ಕಿಹಾಕಿಕೊಂಡಿದೆ. ಬೆಳಿಗ್ಗೆ 9 ಗಂಟೆಗೆ ಧಾರಾ ಮುಹೂರ್ತವಿದ್ದ ಮದುಮಗಳಿಗೆ ಈ ಕಾರಣದಿಂದ ಮುಹೂರ್ತ ಕೈತಪ್ಪುವ ಭಯದಲ್ಲಿ ಎಲಿವೇಟರ್‌ನಲ್ಲಿದ್ದ ಎಲ್ಲರೂ ಜೋರಾಗಿ ಕೂಗಿಕೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸಾಧ್ಯವಾದಷ್ಟು ಬೇಗ ಸ್ಥಳಕ್ಕೆ ತಲುಪಿ ಎಲಿವೇಟರ್‌ನಲ್ಲಿ ಸಿಲುಕಿದ್ದ ಎಲ್ಲರನ್ನೂ ರಕ್ಷಿಸಿದ್ದಾರೆ.
ಇದೇ ಕಟ್ಟಡದಲ್ಲಿ ವಾಸಿಸುವ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ತಕ್ಷಣವೇ ತಮ್ಮ ಸಹೋದ್ಯೋಗಿಗಳನ್ನು ಸ್ಥಳಕ್ಕೆ ಕರೆಯಿಸಿ ಇವರನ್ನು ರಕ್ಷಿಸಿದ್ದಾರೆ.
https://twitter.com/fpjindia/status/1663460160902434817?ref_src=twsrc%5Etfw%7Ctwcamp%5Etweetembed%7Ctwterm%5E1663460160902434817%7Ctwgr%5E0bcbfefc5eea399fe72f1a9086ada5684f0199fa%7Ctwcon%5Es1_&ref_url=https%3A%2F%2Fwww.freepressjournal.in%2Fmumbai%2Fwatch-bride-gets-stuck-in-elevator-of-bhayandars-residential-building-visuals-of-dramatic-rescue-surface