ಅಪ್ರಾಪ್ತನಿಂದ ಆಘಾತಕಾರಿ ಕೃತ್ಯ: ಬೈದಿದಕ್ಕೆ ಬೆಂಕಿ ಹಚ್ಚಿ ತಂದೆಯ ಹತ್ಯೆ

ಹರಿಯಾಣದ ಫರಿದಾಬಾದ್‌ನಲ್ಲಿ ಅಪ್ರಾಪ್ತ ಮಗ ತಂದೆಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ಹರಿಯಾಣದ ಫರಿದಾಬಾದ್‌ ಅಜಯ್ ನಗರ ಭಾಗ -2 ರಲ್ಲಿ ಫೆಬ್ರವರಿ 18 ರಂದು ಘಟನೆ ನಡೆದಿದೆ.

ಮೃತನು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದನು. ತಂದೆ ಗದರಿಸಿದ್ದರಿಂದ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳತನದ ಅನುಮಾನದ ಮೇಲೆ ತಂದೆ ತನ್ನ 14 ವರ್ಷದ ಮಗನನ್ನು ಗದರಿಸಿದ್ದಾನೆ, ಅದು ಅವನನ್ನು ಕೆರಳಿಸಿದೆ. ಅವನು ಬೆಂಕಿ ಹಚ್ಚಿದ್ದಾನೆ. ಬಾಡಿಗೆದಾರ ಮೊಹಮ್ಮದ್ ಅಲೀಮ್ ಕಿರುಚಾಟ ಕೇಳಿದ ಮನೆ ಮಾಲೀಕ ರಿಯಾಜುದ್ದೀನ್ ಗೆ ರಾತ್ರಿ 2 ಗಂಟೆ ಸುಮಾರಿಗೆ ಎಚ್ಚರವಾಗಿದೆ. ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಕಂಡ ಮನೆ ಮಾಲೀಕರು ತಮ್ಮ ನೆರೆಯವರ ಮನೆಗೆ ಹೋಗಿ ಕೂಗಾಡಿ ಅವರನ್ನು ಕರೆದುಕೊಂಡು ಬಂದಿದ್ದಾರೆ. ಅವರು ಮೆಟ್ಟಿಲುಗಳನ್ನು ಹತ್ತಿ ಛಾವಣಿಯನ್ನು ತಲುಪಿದ್ದು, ಕೋಣೆಯಲ್ಲಿ ಬೆಂಕಿಯನ್ನು ನೋಡಿದ್ದಾರೆ. ಕಿರುಚುತ್ತಿದ್ದ ಅಲೀಮ್ ಬಾಗಿಲು ತೆರೆದಾಗ,ಮೃತಪಟ್ಟಿದ್ದರು. ಅವರು ತೀವ್ರ ಸುಟ್ಟ ಗಾಯಗಳಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲೀಮ್ ಅವರ ಮಗ ಸ್ಥಳದಿಂದ ಪರಾರಿಯಾಗಿದ್ದ.

ಪ್ರಾಥಮಿಕ ತನಿಖೆಯಲ್ಲಿ ಮಗನು ತನ್ನ ತಂದೆಯ ಮೇಲೆ ದಹನಕಾರಿ ವಸ್ತುವನ್ನು ಸಿಂಪಡಿಸಿ ಬೆಂಕಿ ಹಚ್ಚಿರಬಹುದು. ಪೊಲೀಸರು ಅಪ್ರಾಪ್ತ ವಯಸ್ಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read