6 ತಿಂಗಳು ವಿದ್ಯಾರ್ಥಿನಿ ಒತ್ತೆಯಾಗಿಟ್ಟುಕೊಂಡು ಅತ್ಯಾಚಾರ: ಶಿಕ್ಷಕರು ಅರೆಸ್ಟ್

ಉತ್ತರ ಪ್ರದೇಶದ ಕಾನ್ಪುರದ ಪ್ರತಿಷ್ಠಿತ ಸಂಸ್ಥೆಯೊಂದರ ಇಬ್ಬರು ಶಿಕ್ಷಕರು ಅಪ್ರಾಪ್ತ NEET ಆಕಾಂಕ್ಷಿಯನ್ನು ಒತ್ತೆಯಾಳಾಗಿಟ್ಟು ಆರು ತಿಂಗಳ ಕಾಲ ಅತ್ಯಾಚಾರವೆಸಗಿದ್ದಾರೆ. ಬಾಲಕಿ ಧೈರ್ಯ ತಂದುಕೊಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ ನಂತರ ಘಟನೆ ಬೆಳಕಿಗೆ ಬಂದಿದ್ದು, ಶಿಕ್ಷಕರನ್ನು ಬಂಧಿಸಿದ್ದಾರೆ.

ಘಟನೆಯ ಬಗ್ಗೆ ವಿವರ ನೀಡಿದ ಸಹಾಯಕ ಪೊಲೀಸ್ ಕಮಿಷನರ್(ಕಲ್ಯಾಣಪುರ) ಅಭಿಷೇಕ್ ಪಾಂಡೆ, ಹುಡುಗಿ ಕಲ್ಯಾಣಪುರ ಪೊಲೀಸ್ ಠಾಣೆಗೆ ಬಂದ ನಂತರ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.

ಜೀವಶಾಸ್ತ್ರ ವಿಷಯ ಕಲಿಸಿದ ಸಾಹಿಲ್ ಸಿದ್ದಿಕಿ ಮತ್ತು ರಸಾಯನಶಾಸ್ತ್ರ ಪಾಠ ಮಾಡಿದ ವಿಕಾಸ್ ಪೋರ್ವಾಲ್ ಎಂಬ ಇಬ್ಬರು ಶಿಕ್ಷಕರನ್ನು ಬಂಧಿಸಲಾಗಿದೆ. ಅತ್ಯಾಚಾರ, ಕ್ರಿಮಿನಲ್ ಬೆದರಿಕೆ, ಅಕ್ರಮ ಬಂಧನ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ(ಪೋಕ್ಸೊ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ಈ ಘಟನೆ ನಡೆದಾಗ ವಿದ್ಯಾರ್ಥಿನಿಗೆ 17 ವರ್ಷವಾಗಿತ್ತು. 2022ರ ಡಿಸೆಂಬರ್ ನಿಂದ ಅವರು ಕೃತ್ಯವೆಸಗಿದ್ದರು. ಕೇವಲ ಎರಡು ತಿಂಗಳ ಹಿಂದೆ ಸಿದ್ದಿಕಿ ಕೋಚಿಂಗ್ ಸೆಂಟರ್‌ನಲ್ಲಿ ಮತ್ತೊಬ್ಬ ವಿದ್ಯಾರ್ಥಿನಿಯೊಂದಿಗೆ ಅಶ್ಲೀಲ ಕೃತ್ಯಗಳಲ್ಲಿ ತೊಡಗಿದ್ದನೆಂದು ಆರೋಪದ ಮೇಲೆ ಬಂಧಿಸಲಾಗಿತ್ತು. ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ

ಏನಿದು ಪ್ರಕರಣ?

ತನ್ನ ದೂರಿನಲ್ಲಿ, ಸಂತ್ರಸ್ತೆ ಪೊಲೀಸರಿಗೆ ಡಿಸೆಂಬರ್ 2022 ರಲ್ಲಿ, ಸಿದ್ದಿಕಿ ತನ್ನನ್ನು ಕಲ್ಯಾಣಪುರದ ಮಕ್ಡಿ-ಖೇರಾ ಪ್ರದೇಶದಲ್ಲಿರುವ ತನ್ನ ಸ್ನೇಹಿತನ ಫ್ಲಾಟ್‌ಗೆ ಹೊಸ ವರ್ಷದ ಪಾರ್ಟಿಗೆ ಆಹ್ವಾನಿಸಿದ್ದ. ಇತರ ವಿದ್ಯಾರ್ಥಿಗಳನ್ನು ಸಹ ಆಹ್ವಾನಿಸಲಾಗಿದೆ ಎಂದು ಹೇಳಿದ್ದ. ಆಕೆ ಫ್ಲಾಟ್‌ಗೆ ಬಂದಾಗ ಸಿದ್ದಿಕಿ ಬಿಟ್ಟರೆ ಬೇರೆ ಯಾರೂ ಕಾಣಲಿಲ್ಲ. ಸಿದ್ದಿಕಿ ತನಗೆ ನಿದ್ರಾಜನಕ ಬೆರೆಸಿದ ತಂಪು ಪಾನೀಯವನ್ನು ನೀಡಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ.

ದೂರಿನ ಪ್ರಕಾರ, ಸಿದ್ದಿಕಿ ಆರು ತಿಂಗಳ ಕಾಲ ತನ್ನ ಫ್ಲಾಟ್‌ನಲ್ಲಿ ಅವಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದನು, ಈ ಸಮಯದಲ್ಲಿ ಅವನು ಪದೇ ಪದೇ ಅವಳ ಮೇಲೆ ಅತ್ಯಾಚಾರವೆಸಗಿದ್ದಾನೆ ಮತ್ತು ಅದರ ಬಗ್ಗೆ ಯಾರೊಂದಿಗಾದರೂ ಮಾತನಾಡಿದರೆ ಆನ್‌ಲೈನ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ.

ಕೆಲವು ತಿಂಗಳ ನಂತರ ಪೋರ್ವಾಲ್ ಕೂಡ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ತನ್ನ ಕುಟುಂಬಕ್ಕೆ ಅಪಾಯವನ್ನುಂಟುಮಾಡಬಹುದೆಂಬ ಭಯದಿಂದ ಪೊಲೀಸರ ಸಹಾಯ ಪಡೆಯಲು ಧೈರ್ಯ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ಎಫ್‌ಐಆರ್‌ನಲ್ಲಿ ಹೇಳಿದ್ದಾರೆ. ಆರು ತಿಂಗಳ ನಂತರ, ಹುಡುಗಿಯ ತಾಯಿ ಕಾನ್ಪುರಕ್ಕೆ ಬಂದರು ಮತ್ತು ಅವಳನ್ನು ಫತೇಪುರಕ್ಕೆ ಕರೆದೊಯ್ದರು.

ದೂರಿನ ಪ್ರಕಾರ, ಹುಡುಗಿ ಆರಂಭದಲ್ಲಿ ಪೊಲೀಸರನ್ನು ಸಂಪರ್ಕಿಸಲು ಹಿಂದೇಟು ಹಾಕಿದ್ದಳು. ಆದರೆ, ಸಿದ್ದಿಕಿ ಇನ್ನೊಬ್ಬ ಕೋಚಿಂಗ್ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ವೀಡಿಯೊವನ್ನು ನೋಡಿದಾಗ ಅವಳು ದೂರು ನೀಡಲು ಮನಸ್ಸು ಮಾಡಿದ್ದಾಳೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read