ಬೆಂಗಳೂರು: ಲಿಫ್ಟ್ ನಲ್ಲಿ ಸಿಲುಕಿ ಸಚಿವ ರಾಮಲಿಂಗಾ ರೆಡ್ಡಿ ಪರದಾಟ ನಡೆಸಿದ್ದಾರೆ. 10 ನಿಮಿಷ ಲಿಫ್ಟ್ ನಲ್ಲಿ ಸಿಲುಕಿಕೊಂಡ ಅವರು ಪರದಾಡಿದ ಘಟನೆ ನಡೆದಿದೆ.
ಖಾಸಗಿ ಆಸ್ಪತ್ರೆಯ ಉದ್ಘಾಟನೆಗೆ ತೆರಳಿದ್ದಾಗ ಘಟನೆ ನಡೆದಿದೆ. ಕರ್ನಾಟಕದ ಗಡಿ ಭಾಗದ ತಮಿಳುನಾಡಿನ ಹೊಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಿದ್ದರು. ಈ ವೇಳೆ ಲಿಫ್ಟ್ ಡೋರ್ ಓಪನ್ ಆಗದೇ ಅದರಲ್ಲೇ ಸಚಿವರು ಸಿಲುಕಿಕೊಂಡಿದ್ದಾರೆ. ನಂತರ ಲಿಫ್ಟ್ ಆಪರೇಟರ್ ಸಹಾಯದಿಂದ ಡೋರ್ ಓಪನ್ ಮಾಡಲಾಗಿದೆ. ಸಚಿವರು ಸೇರಿ ಅವರೊಂದಿಗೆ ಇದ್ದವರು ಸುರಕ್ಷಿತರಾಗಿ ಹೊರಗೆ ಬಂದಿದ್ದಾರೆ ಎನ್ನಲಾಗಿದೆ.
TAGGED:ಲಿಫ್ಟ್