ಬೆಂಗಳೂರು : ಸಚಿವ ಮಧು ಬಂಗಾರಪ್ಪ ಅವರು ಬೇಗಾನೆ ರಾಮಯ್ಯ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.
ಹಿರಿಯರು, ಮಾಜಿ ಸಚಿವರಾದ ಶ್ರೀ ಬೇಗಾನೆ ರಾಮಯ್ಯ ಅವರು ವಿಧಿವಶರಾದ ವಿಷಯ ತಿಳಿದು ಮನಸ್ಸಿಗೆ ಅತೀವ ನೋವಾಯಿತು. ಇಂದು ಅವರ ಹೊಸಹಳ್ಳಿಯ ಸೀತಾ ಫಾರಂಗೆ ತೆರಳಿ ಪಾರ್ಥಿವ ಶರೀರದ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿದೆ.
ಮೃತರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದೆ.”ಬೋರ್ವೆಲ್ ರಾಮಯ್ಯ” ಎಂದೇ ಖ್ಯಾತಿ ಪಡೆದು ಮಲೆನಾಡಿನ ಭಾಗದಲ್ಲಿ ಕುಡಿಯುವ ನೀರಿನ ಅಭಾವಕ್ಕೆ ಇತಿಶ್ರೀ ಹಾಡಿದ್ದ ರಾಮಯ್ಯನವರ ಶ್ರಮ ಹಾಗೂ ಕಾಳಜಿ ಅವಿಸ್ಮರಣೀಯ ಎಂದರು.
TAGGED:ಬೇಗಾನೆ ರಾಮಯ್ಯ