ವಿಜಯಪುರ: ಭೀಮಾ ನದಿ ಪ್ರವಾಹದಿಂದ ಉಂಟಾಗಿದ್ದು, ಪ್ರವಾಹ ಪೀಡಿತ ಸ್ಥಳಗಳಿಗೆ, ಕಾಳಜಿ ಕೇಂದ್ರಗಳಿಗೆ ಇಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ದೇವರನಾವಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮಸಗಿ ಗ್ರಾಮದಲ್ಲಿ ಸಚಿವರು ಪರಿಶೀಲನೆ ನಡೆಸಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಕಲ್ಪಿಸಿರುವ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದ್ದಾರೆ.
ನಂತರ ಸಂತ್ರಸ್ತರೊಂದಿಗೆ ಮಾತನಾಡಿದ ಸಚಿವರು, ಯಾವುದೇ ಭಯಪಡುವ ಅಗತ್ಯವಿಲ್ಲ. ಜಿಲ್ಲಾಡಳಿತ ನಿಮ್ಮ ಜೊತೆಗಿದೆ. ಪ್ರವಾಹ ಪರಿಸ್ಥಿತಿಯನ್ನು ಸಮರ್ಥಕವಾಗಿ ಎದುರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಸಕಲ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ಸೌಲಭ್ಯ ಕಲ್ಪಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಮನೆಗಳಿಗೆ ನೀರು ನುಗ್ಗಿದ ಕೂಡಲೇ ಅಧಿಕಾರಿಗಳು ಕಾಳಜಿ ಕೇಂದ್ರಕ್ಕೆ ಕರೆ ತಂದಿದ್ದಾರೆ ಎಂದು ಸಂತ್ರಸ್ತರು ಹೇಳಿದ್ದು, ಅವರಿಗೆ ಅಗತ್ಯ ಊಟ, ವೈದ್ಯಕೀಯ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಎಂ.ಬಿ. ಪಾಟೀಲ್ ಸೂಚಿಸಿದ್ದಾರೆ. ನಂತರ ಭೀಮಾ ನದಿ ಪ್ರವಾಹ ಪರಿಸ್ಥಿತಿ, ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರವಾಹ ಪೀಡಿತ ಸ್ಥಳಗಳಿಗೆ ಸಚಿವ ಎಂ.ಬಿ. ಪಾಟೀಲ್ ಭೇಟಿ: ಅಗತ್ಯ ಕ್ರಮಕ್ಕೆ ಸೂಚನೆ
ಆಲಮೇಲ ತಾಲ್ಲೂಕಿನ ದೇವಣಗಾಂವ ಗ್ರಾಮಕ್ಕೆ ಭೇಟಿನೀಡಿ, ಭೀಮಾನದಿ ಪ್ರವಾಹದಿಂದ ಹಾನಿಯಾಗಿರುವುದು ಹಾಗೂ ಸುರಕ್ಷಿತ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಕಾಳಜಿಕೇಂದ್ರಕ್ಕೆ ತೆರಳಿ, ನಿರಾಶ್ರಿತರಿಗೆ ಕಲ್ಪಿಸಲಾಗಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದೆ. ಇನ್ನಷ್ಟು ನೆರವು ಮತ್ತು ಸುಧಾರಿತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಕುಮಸಗಿಯಲ್ಲಿ ಭೀಮಾನದಿ ಪ್ರವಾಹದಿಂದ ಹತ್ತಿ, ಈರುಳ್ಳಿ, ಕಬ್ಬು ಬೆಳೆಹಾನಿಯಾಗಿದ್ದು, ಸೂಕ್ತ ಪರಿಹಾರದ ಭರವಸೆ ನೀಡಲಾಗಿದೆ. ಭೀಮಾನದಿಯ ಪ್ರವಾಹಕ್ಕೆ ಆಲಮೇಲ ತಾಲ್ಲೂಕಿನ ಕುಮಸಗಿ ಗ್ರಾಮದಲ್ಲಿ ಹತ್ತಿ, ಈರುಳ್ಳಿ, ಕಬ್ಬು, ಮುಂತಾದ ಬೆಳೆಗಳ ಹಾನಿಯಾಗಿದ್ದು, ರೈತರ ಸಂಕಷ್ಟ ಆಲಿಸಿ, ಸೂಕ್ತ ಪರಿಹಾರವನ್ನು ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಸಿಂದಗಿ ಶಾಸಕ ಅಶೋಕ್ ಮುನಗೂಳಿ, ಜಿಲ್ಲಾಧಿಕಾರಿ ಡಾ. ಆನಂದ್, ಜಿಪಂ CEO ರಿಷಿ ಆನಂದ್ ಹಾಗೂ ಸಂಬಂಧಿತ ಅಧಿಕಾರಿಗಳು ಜೊತೆಗಿದ್ದರು.
ಕುಮಸಗಿ: ಭೀಮಾನದಿ ಪ್ರವಾಹ- ಹತ್ತಿ, ಈರುಳ್ಳಿ, ಕಬ್ಬು… ಬೆಳೆಹಾನಿ, ಸೂಕ್ತ ಪರಿಹಾರದ ಭರವಸೆ
— M B Patil (@MBPatil) September 28, 2025
ಭೀಮಾನದಿಯ ಪ್ರವಾಹಕ್ಕೆ #ಆಲಮೇಲ ತಾಲ್ಲೂಕಿನ ಕುಮಸಗಿ ಗ್ರಾಮದಲ್ಲಿ ಹತ್ತಿ, ಈರುಳ್ಳಿ, ಕಬ್ಬು, ಮುಂತಾದ ಬೆಳೆಗಳಹಾನಿಯಾಗಿದ್ದು, ರೈತರ ಸಂಕಷ್ಟ ಆಲಿಸಿ, ಸೂಕ್ತ ಪರಿಹಾರವನ್ನು ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದೇನೆ.
ಸಿಂದಗಿ ಶಾಸಕರಾದ… pic.twitter.com/sRDju92svI
#ಆಲಮೇಲ ತಾಲ್ಲೂಕಿನ ದೇವಣಗಾಂವ ಗ್ರಾಮಕ್ಕೆ ಭೇಟಿನೀಡಿ, ಭೀಮಾನದಿ ಪ್ರವಾಹದಿಂದ ಹಾನಿಯಾಗಿರುವುದು ಹಾಗೂ ಸುರಕ್ಷಿತ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಕಾಳಜಿಕೇಂದ್ರಕ್ಕೆ ತೆರಳಿ, ನಿರಾಶ್ರಿತರಿಗೆ ಕಲ್ಪಿಸಲಾಗಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದೆ. ಇನ್ನಷ್ಟು ನೆರವು ಮತ್ತು ಸುಧಾರಿತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ… pic.twitter.com/Jxq8rCDZkT
— M B Patil (@MBPatil) September 28, 2025