BIG NEWS : ರಾಜ್ಯದಲ್ಲಿ 67570 ಅಂಗನವಾಡಿ ಕೇಂದ್ರಗಳು, 2329 ಮಿನಿ ಅಂಗನವಾಡಿ ಕೇಂದ್ರಗಳಿವೆ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ

ಬೆಂಗಳೂರು : ರಾಜ್ಯದಲ್ಲಿ 67570 ಅಂಗನವಾಡಿ ಕೇಂದ್ರಗಳು, 2329 ಮಿನಿ ಅಂಗನವಾಡಿ ಕೇಂದ್ರಗಳಿವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದರು.

ಇಂದು ವಿಧಾನಸೌದದಲ್ಲಿ ಕಲಾಪ ಆರಂಭಗೊಂಡಿದ್ದು, ಅಂಗನವಾಡಿಗಳ ಕೇಂದ್ರಗಳ ಸಂಖ್ಯೆ ಎಷ್ಟಿದೆ ವೈ ಎ ನಾರಾಯಣಸ್ವಾಮಿ ಪ್ರಶ್ನೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 67570 ಅಂಗನವಾಡಿ ಕೇಂದ್ರಗಳು 2329 ಮಿನಿ ಅಂಗನವಾಡಿ ಕೇಂದ್ರಗಳಿದೆ. ಕಳೆದ 6 ತಿಂಗಳಿಂದ 3 ವರ್ಷದ 22,12,653 ಮತ್ತು 3 ರಿಂದ 6 ವರ್ಷದ 17,37,526 ಮಕ್ಕಳು ಒಟ್ಟು ಜಿಲ್ಲಾವಾರು 39,50,179 ಮಕ್ಕಳು ದಾಖಲಾಗಿವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದರು. ಅಂಗನವಾಡಿಗೆ ಕೊಳೆತ ಮೊಟ್ಟೆ ವಿತರಣೆ ಸಂಬಂಧ ಇಂದು ಸದನದಲ್ಲಿ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಅಂಗನವಾಡಿಗೆ ಕೊಳೆತ ಮೊಟ್ಟೆ ವಿತರಣೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read