ಮಂಡ್ಯ: ರಸಗೊಬ್ಬರ ಕೇಳಿದ್ದಕ್ಕೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕೆಂಡಾಮಂಡಲರಾಗಿದ್ದಾರೆ. ರಸಗೊಬ್ಬರ ಕೇಳಿದ ರೈತನನ್ನು ಗದರಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಘಟನೆ ನಡೆದಿದೆ. ಬಿತ್ತನೆ ರಾಗಿ ವಿತರಣೆ ಕಾರ್ಯಕ್ರಮದಲ್ಲಿ ಸಚಿವರು ಭಾಷಣ ಮಾಡುತ್ತಿದ್ದರು. ಭಾಷಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ವೇಳೆ ಮೊದಲು ರಸಗೊಬ್ಬರ ನೀಡುವಂತೆ ರೈತ ಕೇಳಿದ್ದಾರೆ. ಮಾತಿಗೆ ಮಾತು ಬೆಳೆಸಿ ಸಚಿವರ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ.
ಈ ವೇಳೆ ಕೋಪಗೊಂಡ ಸಚಿವ ಚಲುವರಾಯಸ್ವಾಮಿ ರೈತನಿಗೆ ಗದರಿದ್ದಾರೆ. ಮಾತು ಕೇಳಲು ಇಷ್ಟವಿಲ್ಲದಿದ್ದರೆ ಹತ್ತಿ ಕೊಡಿ, ಇಲ್ಲ ಟವೆಲ್ ಸುತ್ತಿಕೊಳ್ಳಲಿ. ನಾನು ಇಲ್ಲಿ ಚೌಕಾಸಿ ಮಾಡುವುದಕ್ಕೆ ಬಂದಿಲ್ಲ. ಕರೆಕ್ಟಾಗಿರೋದನ್ನ ಕೇಳಿದರೆ ಕರೆಕ್ಟಾಗಿ ಹೇಳ್ತೀನಿ. ಇಲ್ಲ ಸುಮ್ಮನೆ ಸೈಡ್ನಲ್ಲಿ ಕುಳಿತುಕೊಂಡು ಮಾತನಾಡಬೇಡಿ. ಪ್ರತಿ ಮನೆಗೆ ತಿಂಗಳಿಗೆ 2000 ರೂ. ಕೊಡುತ್ತಿದ್ದೇವೆ. ವರ್ಷಕ್ಕೆ ನಾಗಮಂಗಲಕ್ಕೆ 200 ಕೋಟಿ ರೂಪಾಯಿ ಕೊಡುತ್ತಿದ್ದೇವೆ. ತಾಲೂಕು ಪಂಚಾಯಿತಿ ಕಟ್ಟಡ ಕಟ್ಟಿದ್ದು ಯಾರು? ಕೆಇಬಿ ಆಫೀಸ್ ತಂದಿದ್ದು ಯಾರು ಎಂದು ಗದರಿದ್ದಾರೆ.